ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ಅಧಿಕ ರಕ್ತದೊತ್ತಡ ಸಮಸ್ಯೆಯ ಮೇಲೆ ಬದಲಾದ ಜೀವನಶೈಲಿ, ಆಹಾರ ಪದ್ಧತಿ, ಒತ್ತಡದ ಪ್ರಭಾವ ಇದೆ. ಆದರೆ ಸಮರ್ಪಕ ಜೀವನಶೈಲಿಯನ್ನು ಅನುಸರಿಸಿದರೆ ಈ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಬಹುದು.

ಅಧಿಕ ರಕ್ತದೊತ್ತಡ ನಿವಾರಣೆಗೆ ಆಹಾರ ಸೂತ್ರವನ್ನೂ ಪಾಲಿಸುವುದು ಪರಿಣಾಮಕಾರಿ. ಹಣ್ಣುಗಳು, ತರಕಾರಿ, ಕಡಿಮೆ ಕೊಬ್ಬು ಇರುವ ಡೈರಿ ಉತ್ಪನ್ನಗಳನ್ನು ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.

ಪೌಷ್ಟಿಕಾಂಶದ ಆಹಾರವನ್ನೇ ತಿನ್ನಿ

ಹೆಚ್ಚು ಪೌಷ್ಟಿಕಾಂಶ ಹೊಂದಿರುವ ಆಹಾರ ಪದಾರ್ಥಗಳನ್ನೇ ಸೇವಿಸಿ. ಹೆಚ್ಚು ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನಿ. ಧಾನ್ಯ, ಕೋಳಿ, ತಾಜಾ ಮೀನು ಮತ್ತು ಕಡಿಮೆ ಕೊಬ್ಬಿನಂಶ ಇರುವ ಡೇರಿ ಉತ್ಪನ್ನಗಳನ್ನು ಸೇವಿಸಿ. ಹಣ್ಣು, ತರಕಾರಿ, ಹಸಿ ತರಕಾರಿಯಂತಹ ಪದಾರ್ಥಗಳನ್ನು ಹೆಚ್ಚು ತಿನ್ನುವ ಮೂಲಕ ನಿಮ್ಮ ದೇಹಕ್ಕೆ ಹೆಚ್ಚು ಪೋಟಾಷಿಯಂ ಅಂಶ ಸೇರುವಂತೆ ನೋಡಿಕೊಳ್ಳಿ. ಈ ಪದಾರ್ಥಗಳು ಅಧಿಕ ರಕ್ತದೊತ್ತಡ ಬಾರದಂತೆ ನಿಯಂತ್ರಿಸುತ್ತವೆ ಮತ್ತು ರಕ್ತದೊತ್ತಡ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ರೆಡಿ ಟು ಈಟ್‌ ಫುಡ್ಸ್‌, ಸಂಸ್ಕರಿತ ಆಹಾರಗಳನ್ನು ದೂರವಿಡಿ. ಗ್ಲೈಸೆಮಿಕ್‌ ಇಂಡೆಕ್ಸ್‌ ಪ್ರಮಾಣ ಕಡಿಮೆ ಇರುವಂತಹ ಆಹಾರ ಪದಾರ್ಥಗಳನ್ನೇ ಆಯ್ಕೆ ಮಾಡಿಕೊಳ್ಳಿ. ಒಂದು ಚಮಚ ಉಪ್ಪಿನಲ್ಲಿ 2,300 ಮಿಲಿಗ್ರಾಂ ಸೋಡಿಯಂ ಅಂಶ ಇರುತ್ತದೆ. ಹೀಗಾಗಿ ನೀವು ಊಟ ಮಾಡುವಾಗ ಹೆಚ್ಚುವರಿಯಾಗಿ ಉಪ್ಪನ್ನು ಬಳಸದಿರಿ. ಇದರ ಬದಲಾಗಿ ನಿಮ್ಮ ಆಹಾರಕ್ಕೆ ಮಸಾಲೆ, ನಿಂಬೆ ಮತ್ತು ಇತರೆ ವನಸ್ಪತಿಗಳನ್ನು ರುಚಿಗೆ ತಕ್ಕಷ್ಟು ಸೇರಿಸಿಕೊಳ್ಳಿ.

ನಿಮ್ಮ ಡಯಟ್ನಲ್ಲಿ ಸೋಡಿಯಂ ಕಡಿಮೆ ಮಾಡಿ

ದೈನಂದಿನ ಆಹಾರ ಪದಾರ್ಥಗಳು ಮತ್ತು ಉಪ್ಪಿನಲ್ಲಿರುವ ಸೋಡಿಯಂ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಿ. ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಮೂತ್ರಪಿಂಡ ರೋಗದಿಂದ ಬಳಲುತ್ತಿರುವವರು ದಿನಕ್ಕೆ 1,500 ಮಿಲಿಗ್ರಾಂನಷ್ಟು ಸೋಡಿಯಂ ಅಂಶವಿರುವ ಪದಾರ್ಥಗಳನ್ನು ತಿಂದರೆ ಸಾಕು. ಆರೋಗ್ಯವಂತರಲ್ಲಿ 2,300 ಮಿಲಿಗ್ರಾಂನಷ್ಟು ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಸಾಕು.

ಹೈಪರ್ಟೆನ್ಷನ್ನಿವಾರಣೆಗೆ ಸೂಕ್ತ ಆಹಾರ

ಅಧಿಕ ರಕ್ತದೊತ್ತಡ ನಿವಾರಣೆಗೆ ಆಹಾರ ಸೂತ್ರವನ್ನೂ ಪಾಲಿಸುವುದು ಪರಿಣಾಮಕಾರಿ. ಹಣ್ಣುಗಳು, ತರಕಾರಿ, ಕಡಿಮೆ ಕೊಬ್ಬು ಇರುವ ಡೈರಿ ಉತ್ಪನ್ನಗಳನ್ನು ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.

ದಾಸವಾಳದ ಚಹಾ: ಇದರಲ್ಲಿ ಆ್ಯಂಥೋಸಿಯಾನಿನ್‌ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇವು ರಕ್ತನಾಳಗಳ ಅಗಲ ಕಿರಿದಾಗುವುದನ್ನು ತಡೆಯುತ್ತವೆ.

ಗ್ರೀನ್ಟೀ: ಇದರಲ್ಲಿರುವ ಪಾಲಿಫೆನಾಲ್‌ ಅಂಶವು ರಕ್ತದೊತ್ತಡವನ್ನು ತಡೆಯುತ್ತದೆ.

ದಾಳಿಂಬೆ ಜ್ಯೂಸ್‌: ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಅಪಧಮನಿಗಳಲ್ಲಿ ತಡೆ ಉಂಟಾಗುವುದನ್ನು ತಪ್ಪಿಸುತ್ತದೆ.

ಬೀಟ್ರೂಟ್ಜ್ಯೂಸ್‌: ಇದು ಅಪಧಮನಿಗಳನ್ನು ರಿಲ್ಯಾಕ್ಸ್‌ ಮಾಡುತ್ತದೆ. ಪ್ರತಿದಿನ 250 ಎಂಎಲ್‌ ಬೀಟ್‌ರೂಟ್‌ ಜ್ಯೂಸ್‌ ಸೇವನೆಯಿಂದ 7.7/5/2ಎಂಎಂಎಚ್‌ಜಿಯಷ್ಟು ಬ್ಲಡ್‌ ಪ್ರೆಷರನ್ನು ಕಡಿಮೆ ಮಾಡಬಹುದು.

ಬಾಳೆಹಣ್ಣು: ಪೊಟ್ಯಾಷಿಯಂ ಅಧಿಕವಿರುವ ಆಹಾರ ಸೇವನೆಯೂ ಉತ್ತಮ. ಹೀಗಾಗಿ ಬಾಳೆಹಣ್ಣು ರಕ್ತದೊತ್ತಡ ಇರುವವರಿಗೆ ಪೂರಕ.

ಬ್ರೊಕೊಲಿ: ಪೊಟ್ಯಾಷಿಯಂ, ಮೆಗ್ನೇಷಿಯಂ ಹಾಗೂ ಕ್ಯಾಲ್ಶಿಯಂ ಅಧಿಕವಿರುವ ಬ್ರೊಕೊಲಿ ರಕ್ತದೊತ್ತಡ ನಿಯಂತ್ರಿಸಲು ಅತ್ಯುತ್ತಮ.

Leave a Comment

error: Content is protected !!