ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ಮಧುಮೇಹ ನಿಯಂತ್ರಣದಲ್ಲಿಡುವ 10 ಗಿಡಮೂಲಿಕೆಗಳು!!!

ಆರೋಗ್ಯ ಸಲಹೆಗಳು

ಮಧುಮೇಹ ನಿಯಂತ್ರಣದಲ್ಲಿಡುವ 10 ಗಿಡಮೂಲಿಕೆಗಳು!!! ಮಧುಮೇಹಿಗಳು ಈ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಆರೋಗ್ಯದ ಕಡೆ ಈ ಹಿಂದಿಗಿಂತಲೂ ತುಂಬಾ ಎಚ್ಚರಿಕೆವಹಿಸಬೇಕಾಗಿದೆ. ಹೊರಗಡೆ ವಾಕಿಂಗ್‌ ಹೋಗಲು ಸಾಧ್ಯವಿಲ್ಲ ಅಂತ ಸುಮ್ಮನೆ ಕೂರಬಾರದು, ಮನೆಯಲ್ಲಿ ವ್ಯಾಯಾಮವನ್ನು ಮಾಡಬೇಕು ಹಾಗೂ ತೆಗೆದುಕೊಳ್ಳುವ ಆಹಾರದಲ್ಲಿ ಕಟ್ಟುನಿಟ್ಟಿನ ಪಥ್ಯ ಮಾಡಬೇಕು. ಯಾವುದೇ ಕಾರಣಕ್ಕೂ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಲು ಬಿಡಬಾರದು. ಮಧುಮೇಹದಲ್ಲಿ ಟೈಪ್1 ಹಾಗೂ ಟೈಪ್ 2 ಮಧುಮೇಹ ಎಂಬ ಎರಡು ವಿಧದಲ್ಲಿ ಶೇ. 90ರಷ್ಟು ಜನರು ಟೈಪ್ 2 ಮಧುಮೇಹ ಹೆಚ್ಚಿನವರಲ್ಲಿ ಕಂಡು ಬರುತ್ತದೆ. … Read more

ಅರೋಗ್ಯ ಸಲಹೆಗಳು – ದಾಳಿಂಬೆ ಆರೋಗ್ಯ ಪ್ರಯೋಜನಗಳು

ದಾಳಿಂಬೆ ಆರೋಗ್ಯ ಪ್ರಯೋಜನಗಳು

1. ಆಂಟಿಆಕ್ಸಿಡೆಂಟ್ಗಳು  ದಾಳಿಂಬೆ ಬೀಜಗಳು ತಮ್ಮ ವೈಭವದ ಕೆಂಪು ವರ್ಣವನ್ನು ಪಾಲಿಫಿನಾಲ್ಗಳಿಂದ ಪಡೆಯುತ್ತವೆ. ಈ ರಾಸಾಯನಿಕಗಳು ಪ್ರಬಲ ಉತ್ಕರ್ಷಣ ನಿರೋಧಕಗಳು. ದಾಳಿಂಬೆ ರಸವು ಇತರ ಹಣ್ಣಿನ ರಸವನ್ನು ಹೊರತುಪಡಿಸಿ ಉನ್ನತ ಮಟ್ಟದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಕೆಂಪು ವೈನ್ ಮತ್ತು ಹಸಿರು ಚಹಾಕ್ಕಿಂತ ಮೂರು ಪಟ್ಟು ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ದಾಳಿಂಬೆ ರಸದಲ್ಲಿನ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಜೀವಕೋಶಗಳನ್ನು ಹಾನಿ ಮಾಡುವುದನ್ನು ತಪ್ಪಿಸುತ್ತವೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. … Read more

ಥೈರಾಯಿಡ್ ಕಡಿಮೆ ಮಾಡಿಕೊಳ್ಳಲು ಮನೆಮದ್ದು..!!

ಆರೋಗ್ಯ ಸಲಹೆಗಳು - ಥೈರಾಯಿಡ್ ಕಡಿಮೆ ಮಾಡಿಕೊಳ್ಳಲು ಮನೆಮದ್ದು

ಜನರು ಯಾವಾಗ ಆಹಾರ ಪದ್ಧತಿಯ ಕ್ರಮವನ್ನು ಬದಲಾಯಿಸುತ್ತಾ ಹೋಗುತ್ತಾರೆ ಆಗ ಅವರು ನಾನಾ ತರಹದ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ ಅಂತಹ ನಾನಾ ತರಹದ ಸಮಸ್ಯೆ ಗಳಲ್ಲಿ ಥೈರಾಯ್ಡ್ ಸಮಸ್ಯೆ ಕೂಡ ಒಂದಾಗಿದೆ, ಥೈರಾಯ್ಡ್ ಸಮಸ್ಯೆ ಬಂದರೆ ಕಾಣಿಸಿಕೊಳ್ಳುವ ಲಕ್ಷಣಗಳು ಅಂದರೆ ಒಣ ಚರ್ಮ ತೂಕ ಹೆಚ್ಚಾಗುವುದು ಜ್ಞಾಪಕ ಶಕ್ತಿ ಕ್ಷೀಣಿಸುವುದು ಮತ್ತು ಗಂಟಲಿನ ಭಾಗದಲ್ಲಿ ಊದಿಕೊಳ್ಳುವುದು ಅಥವಾ ಹೆಚ್ಚು ನೋವು ಕಂಡು ಬರುವುದು. ಈ ಮೇಲೆ ತಿಳಿಸಿದಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ … Read more

ಅರೋಗ್ಯ ಸಲಹೆಗಳು – ಮಾನಸಿಕ ಯೋಗಕ್ಷೇಮಕ್ಕೆ ಹತ್ತು ಸಲಹೆಗಳು

ಆರೋಗ್ಯ ಸಲಹೆಗಳು - ಮಾನಸಿಕ ಯೋಗಕ್ಷೇಮಕ್ಕೆ ಹತ್ತು ಸಲಹೆಗಳು

ಮಾನಸಿಕ ಆರೋಗ್ಯದ ಕಾಳಜಿಯೂ ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ. ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವು ನಮ್ಮ ಪರಿಪೂರ್ಣ ಯೋಗಕ್ಷೇಮದ ಪ್ರಮುಖವಾದ ಭಾಗವಾಗಿದೆ. ನಮ್ಮಲ್ಲಿ ಹೆಚ್ಚಿನವರು, ಜಿಮ್ಗೆ ಹೋಗುವುದು, ವಾಕಿಂಗ್ ಮಾಡುವುದು, ಈಜು ಮತ್ತು ಆಟಗಳನ್ನಾಡುವ ಮೂಲಕ ದೈಹಿಕವಾಗಿ ಸದೃಢರಾಗಿರಲು ಪ್ರಯತ್ನಿಸುತ್ತೇವೆ. ಹಾಗೆಯೇ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕಾಗಿಯೂ ಕೆಲವು ಚಟುವಟಿಕೆಗಳನ್ನು ಮಾಡಬೇಕು. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಗೆ ಮಾನಸಿಕ ಕಾಯಿಲೆ ಇಲ್ಲವೆಂದರೆ ಆತನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸದೃಢವಾಗಿದ್ದಾನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ವಿವರಿಸುತ್ತಾರೆ. ನಿಮ್ಮ ಬಾವನಾತ್ಮಕ … Read more

error: Content is protected !!