“ನಾವು ಹೇಗೆ ತಿನ್ನುತ್ತೀವಿ ಎಂಬುವುದು ನಾವು ಏನನ್ನು ತಿನ್ನುತ್ತೀವಿ ಅನ್ನುವುದರಷ್ಟೇ ಮುಖ್ಯ. ಸರಿಯಾಗಿ ತಿನ್ನುವುದು ಹೇಗೆ ಎಂದು ತೋರಿಸುವ ಈ ೫ ಸರಳವಾದ ಆಹಾರ ಸಲಹೆಗಳು, ನಾವು ತಿನ್ನುವ ಆಹಾರದಿಂದ ಉತ್ತಮವಾದದನ್ನು ಪಡೆಯುವುದಕ್ಕೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ.” #೧: ಎಷ್ಟು ಪ್ರಮಾಣದಲ್ಲಿ ತಿನ್ನಬೇಕು? ಹೊಟ್ಟೆ ಖಾಲಿಯಾಗಿರುವಾಗ ಮಾನವನ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಹೊಟ್ಟೆ ಹಸಿದಿದೆ ಎಂಬ ಸಂದೇಶವನ್ನು ಮೆದುಳಿಗೆ ಕೊಂಡೊಯ್ಯುವ ghrelin ಎಂಬ ಹಾರ್ಮೋನನ್ನು ಖಾಲಿ ಹೊಟ್ಟೆಯು ಉತ್ಪಾದಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಕುತೂಹಲಕಾರಿ ವಿಷಯವೇನೆಂದರೆ, ಈ ಹಾರ್ಮೋನು ಇತರೆ ಕೆಲಸವನ್ನು ಸಹ ಮಾಡುವಂತೆ ತೋರುತ್ತದೆ. Ghrelin, ಕಲಿಕೆ, ಜ್ಞಾಪಕ ಶಕ್ತಿ ಮತ್ತು ಪ್ರಾದೇಶಿಕ ವಿಶ್ಲೇಷಣೆಯನ್ನು ನಿಭಾಯಿಸುವ; ಹಾಗೂ ನಮ್ಮನ್ನು ಎಚ್ಚರ, ಸಕ್ರಿಯ ಮತ್ತು ಕೇಂದ್ರೀಕೃತರನ್ನಾಗಿಸುವ ಹಿಪ್ಪೋಕಾಂಪಸ್-ನ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ. ನಾವು ಏನನ್ನೂ ತಿನ್ನಬಾರದು ಎಂದು ಇದರ ಅರ್ಥವಲ್ಲ, ಬದಲಾಗಿ, ನಾವು ಎಷ್ಟು ತಿನ್ನುತ್ತಿದ್ದೇವೆ ಎಂಬುದರ ಬಗ್ಗೆ ನಾವು ಜಾಗರೂಕರಾಗಿರಬೇಕು ಎನ್ನುವುದನ್ನು ಸೂಚಿಸುತ್ತದೆ. ಯೋಗಿ ಮತ್ತು ದಾರ್ಶನಿಕರಾದ, ಸದ್ಗುರುಗಳು ನಮ್ಮ ಆಹಾರ ಸೇವನೆಯನ್ನು ಸರಿಪಡಿಸಿಕೊಳ್ಳುವ ಮೂಲಕ ನಮ್ಮ ದಿನವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ವಿವರಿಸುತ್ತಾರೆ. “ನೀವು ದಿನಪೂರ್ತಿ ತಿನ್ನುತ್ತಾ ಇರಬಾರದು. ನೀವು ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ದಿನಕ್ಕೆ ಮೂರು ಬಾರಿ ಊಟ ಮಾಡುವುದು ನಿಮ್ಮ ಜೀವನಕ್ಕೆ ಸರಿಹೊಂದುತ್ತದೆ. ನಿಮ್ಮ ವಯಸ್ಸು ಮೂವತ್ತಕ್ಕಿಂತ ಹೆಚ್ಚಿದ್ದರೆ, ದಿನಕ್ಕೆ ಎರಡು ಬಾರಿ ಊಟ ಮಾಡುವುದು ಉತ್ತಮ. ಹೊಟ್ಟೆ ಖಾಲಿಯಾಗಿದ್ದಾಗ ಮಾತ್ರ ನಮ್ಮ ದೇಹ ಮತ್ತು ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ. ಎರಡೂವರೆ ಗಂಟೆಗಳ ಒಳಗೆ ಆಹಾರವು ಹೊಟ್ಟೆಯ ಚೀಲದಿಂದ ಆಚೆ ಹೋಗುವ ರೀತಿಯಲ್ಲಿ, ಹಾಗೂ ಹನ್ನೆರಡರಿಂದ ಹದಿನೆಂಟು ಗಂಟೆಗಳೊಳಗೆ, ಇದು ಸಂಪೂರ್ಣವಾಗಿ ನಿಮ್ಮ ವ್ಯವಸ್ಥೆಯಿಂದ ಆಚೆ ಹೋಗುವ ರೀತಿಯಲ್ಲಿ, ಅರಿವಿನಿಂದ ತಿನ್ನಿರಿ. ನೀವು ಈ ಸರಳ ಅರಿವನ್ನು ಕಾಪಾಡಿಕೊಂಡರೆ, ಹೆಚ್ಚು ಶಕ್ತಿ, ಚುರುಕುತನ ಮತ್ತು ಎಚ್ಚರವನ್ನು ಅನುಭವಿಸುತ್ತೀರಿ.” – ಸದ್ಗುರು #೨: ಅಗಿಯಲು ಮರೆಯದಿರಿ! ಆರೋಗ್ಯವಾಗಿ ತಿನ್ನುವುದರ ಬಗ್ಗೆ ನಮ್ಮ ಎರಡನೆಯ ಸಲಹೆಯನ್ನು ನೀವು ಸಣ್ಣವರಿದ್ದಾಗ, ಪ್ರಾಯಶಃ ಸಾವಿರಾರು ಸಲ ನಿಮ್ಮ ಹೆತ್ತವರಿಂದ ನೀವು ಹೇಳಿಸಿಕೊಂಡಿರುವ ಸಂಗತಿ: ಆಹಾರವನ್ನು ಸರಿಯಾಗಿ ಅಗಿಯುವುದು ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸ್ಟಾರ್ಚ್ ಹೊಂದಿರುವ ಆಹಾರಕ್ಕೆ, ಜೀರ್ಣಕ್ರಿಯೆಯು ಶೇ. ೩೦%ನಷ್ಟು ಎಂಜಲಿನ ಮೂಲಕ ಉಂಟಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಊಟದ ನಂತರ, ಮಲಗುವ ಮೊದಲು, ಕನಿಷ್ಟ ಎರಡು ಗಂಟೆಗಳ ವಿರಾಮವನ್ನು ನೀಡಿ. ಜೀರ್ಣಕ್ರಿಯೆಯು ನಿಮ್ಮ ಚಯಾಪಚಯ (metabolic) ಚಟುವಟಿಕೆಯನ್ನು ಹೆಚ್ಚಿಸುತ್ತದೆ. ನೀವು ಅಂತಹ ಸ್ಥಿತಿಯಲ್ಲಿ ಮಲಗಿದರೆ, ನೀವು ಚೆನ್ನಾಗಿ ನಿದ್ದೆಯನ್ನೂ ಮಾಡುವುದಿಲ್ಲ ಹಾಗೂ ತಿಂದಿದ್ದನ್ನು ಸರಿಯಾಗಿ ಜೀರ್ಣಿಸಿಕೊಳ್ಳುವುದಿಲ್ಲ ಸಹ! ನೀವು ಏನನ್ನು ತಿಂದಿರೋ, ಅದನ್ನು ಅವಲಂಬಿಸಿ, ತಿಂದ ತಕ್ಷಣ ಮಲಗಿದರೆ, ಆಹಾರದ ಹೆಚ್ಚಿನ ಭಾಗವು ಜೀರ್ಣವಾಗದೆ ಉಳಿಯಬಹುದು. ಆಹಾರವನ್ನು ಅಗಿಯುವ ಬಗ್ಗೆ ಯೋಗ ವಿಜ್ಞಾನದ ದೃಷ್ಟಿಕೋನವನ್ನು ಕೂಡ ಸದ್ಗುರುಗಳು ನೀಡುತ್ತಾರೆ. … Read more