ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ಅಧಿಕ ರಕ್ತದೊತ್ತಡ ನಿವಾರಣೆಗೆ ಸೂಕ್ತ ಆಹಾರ

ಅಧಿಕ ರಕ್ತದೊತ್ತಡ ನಿವಾರಣೆಗೆ ಸೂಕ್ತ ಆಹಾರ

ಅಧಿಕ ರಕ್ತದೊತ್ತಡ ಸಮಸ್ಯೆಯ ಮೇಲೆ ಬದಲಾದ ಜೀವನಶೈಲಿ, ಆಹಾರ ಪದ್ಧತಿ, ಒತ್ತಡದ ಪ್ರಭಾವ ಇದೆ. ಆದರೆ ಸಮರ್ಪಕ ಜೀವನಶೈಲಿಯನ್ನು ಅನುಸರಿಸಿದರೆ ಈ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಬಹುದು. ಅಧಿಕ ರಕ್ತದೊತ್ತಡ ನಿವಾರಣೆಗೆ ಆಹಾರ ಸೂತ್ರವನ್ನೂ ಪಾಲಿಸುವುದು ಪರಿಣಾಮಕಾರಿ. ಹಣ್ಣುಗಳು, ತರಕಾರಿ, ಕಡಿಮೆ ಕೊಬ್ಬು ಇರುವ ಡೈರಿ ಉತ್ಪನ್ನಗಳನ್ನು ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಪೌಷ್ಟಿಕಾಂಶದ ಆಹಾರವನ್ನೇ ತಿನ್ನಿ ಹೆಚ್ಚು ಪೌಷ್ಟಿಕಾಂಶ ಹೊಂದಿರುವ ಆಹಾರ ಪದಾರ್ಥಗಳನ್ನೇ ಸೇವಿಸಿ. ಹೆಚ್ಚು ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನಿ. ಧಾನ್ಯ, ಕೋಳಿ, ತಾಜಾ ಮೀನು ಮತ್ತು ಕಡಿಮೆ ಕೊಬ್ಬಿನಂಶ ಇರುವ ಡೇರಿ ಉತ್ಪನ್ನಗಳನ್ನು ಸೇವಿಸಿ. ಹಣ್ಣು, ತರಕಾರಿ, ಹಸಿ ತರಕಾರಿಯಂತಹ ಪದಾರ್ಥಗಳನ್ನು ಹೆಚ್ಚು ತಿನ್ನುವ ಮೂಲಕ ನಿಮ್ಮ ದೇಹಕ್ಕೆ ಹೆಚ್ಚು ಪೋಟಾಷಿಯಂ ಅಂಶ ಸೇರುವಂತೆ ನೋಡಿಕೊಳ್ಳಿ. ಈ ಪದಾರ್ಥಗಳು ಅಧಿಕ ರಕ್ತದೊತ್ತಡ ಬಾರದಂತೆ ನಿಯಂತ್ರಿಸುತ್ತವೆ ಮತ್ತು ರಕ್ತದೊತ್ತಡ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ರೆಡಿ ಟು ಈಟ್‌ ಫುಡ್ಸ್‌, ಸಂಸ್ಕರಿತ ಆಹಾರಗಳನ್ನು ದೂರವಿಡಿ. ಗ್ಲೈಸೆಮಿಕ್‌ ಇಂಡೆಕ್ಸ್‌ ಪ್ರಮಾಣ ಕಡಿಮೆ ಇರುವಂತಹ ಆಹಾರ ಪದಾರ್ಥಗಳನ್ನೇ ಆಯ್ಕೆ ಮಾಡಿಕೊಳ್ಳಿ. ಒಂದು ಚಮಚ ಉಪ್ಪಿನಲ್ಲಿ 2,300 ಮಿಲಿಗ್ರಾಂ ಸೋಡಿಯಂ ಅಂಶ ಇರುತ್ತದೆ. ಹೀಗಾಗಿ ನೀವು ಊಟ ಮಾಡುವಾಗ ಹೆಚ್ಚುವರಿಯಾಗಿ ಉಪ್ಪನ್ನು ಬಳಸದಿರಿ. ಇದರ ಬದಲಾಗಿ ನಿಮ್ಮ ಆಹಾರಕ್ಕೆ ಮಸಾಲೆ, ನಿಂಬೆ ಮತ್ತು ಇತರೆ ವನಸ್ಪತಿಗಳನ್ನು ರುಚಿಗೆ ತಕ್ಕಷ್ಟು ಸೇರಿಸಿಕೊಳ್ಳಿ. ನಿಮ್ಮ ಡಯಟ್‌ನಲ್ಲಿ ಸೋಡಿಯಂ ಕಡಿಮೆ ಮಾಡಿ ದೈನಂದಿನ ಆಹಾರ ಪದಾರ್ಥಗಳು ಮತ್ತು ಉಪ್ಪಿನಲ್ಲಿರುವ ಸೋಡಿಯಂ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಿ. ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಮೂತ್ರಪಿಂಡ ರೋಗದಿಂದ ಬಳಲುತ್ತಿರುವವರು ದಿನಕ್ಕೆ 1,500 ಮಿಲಿಗ್ರಾಂನಷ್ಟು ಸೋಡಿಯಂ ಅಂಶವಿರುವ ಪದಾರ್ಥಗಳನ್ನು ತಿಂದರೆ ಸಾಕು. ಆರೋಗ್ಯವಂತರಲ್ಲಿ 2,300 ಮಿಲಿಗ್ರಾಂನಷ್ಟು ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಸಾಕು. ಹೈಪರ್‌ ಟೆನ್ಷನ್‌ ನಿವಾರಣೆಗೆ ಸೂಕ್ತ ಆಹಾರ ಅಧಿಕ ರಕ್ತದೊತ್ತಡ ನಿವಾರಣೆಗೆ ಆಹಾರ ಸೂತ್ರವನ್ನೂ ಪಾಲಿಸುವುದು ಪರಿಣಾಮಕಾರಿ. ಹಣ್ಣುಗಳು, ತರಕಾರಿ, ಕಡಿಮೆ ಕೊಬ್ಬು ಇರುವ ಡೈರಿ ಉತ್ಪನ್ನಗಳನ್ನು ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ದಾಸವಾಳದ ಚಹಾ: ಇದರಲ್ಲಿ ಆ್ಯಂಥೋಸಿಯಾನಿನ್‌ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇವು ರಕ್ತನಾಳಗಳ ಅಗಲ ಕಿರಿದಾಗುವುದನ್ನು ತಡೆಯುತ್ತವೆ. ಗ್ರೀನ್‌ಟೀ: ಇದರಲ್ಲಿರುವ ಪಾಲಿಫೆನಾಲ್‌ ಅಂಶವು ರಕ್ತದೊತ್ತಡವನ್ನು ತಡೆಯುತ್ತದೆ. ದಾಳಿಂಬೆ ಜ್ಯೂಸ್‌: ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಅಪಧಮನಿಗಳಲ್ಲಿ ತಡೆ ಉಂಟಾಗುವುದನ್ನು ತಪ್ಪಿಸುತ್ತದೆ. ಬೀಟ್‌ರೂಟ್‌ ಜ್ಯೂಸ್‌: ಇದು ಅಪಧಮನಿಗಳನ್ನು ರಿಲ್ಯಾಕ್ಸ್‌ ಮಾಡುತ್ತದೆ. ಪ್ರತಿದಿನ 250 ಎಂಎಲ್‌ ಬೀಟ್‌ರೂಟ್‌ … Read more

ಬೊಜ್ಜಿನ ಸಮಸ್ಯೆ ನಿಯಂತ್ರಣ ಹೇಗೆ? ಇಲ್ಲಿದೆ ಪರಿಹಾರ

ಬೊಜ್ಜಿನ ಸಮಸ್ಯೆ'ನಿಯಂತ್ರಣ ಹೇಗೆ? ಇಲ್ಲಿದೆ ಪರಿಹಾರ

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ಅತಿಯಾದ ತೂಕವು ಅಧಿಕಾವಧಿ ಕೆಲಸ ಮಾಡುವಂತೆ ದೇಹದ ಅಂಗಗಳ ಮೇಲೆ ಒತ್ತಡವನ್ನುಂಟುಮಾಡುತ್ತದೆ.ದಣಿದಂತೆ ಮಾಡುವುದಲ್ಲದೆ, ಉಸಿರಾಟ, ಕೀಲು ನೋವು, ಜೀರ್ಣಕ್ರಿಯೆ, ಗ್ಯಾಸ್ಟ್ರಿಕ್ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.  ಡಯಾಬಿಟಿಸ್, ಪಾರ್ಶ್ವವಾಯು, ನಿದ್ರಾ ಹೀನತೆ, ಬಂಜೆತನ  ಮತ್ತಿತರ ಧೀರ್ಘಾವಧಿಯ ಅಪಾಯಕಾರಿಯಾದಂತಹ ಸಮಸ್ಯೆಗಳಿಗೂ ಬೊಚ್ಚು ಕಾರಣವಾಗುತ್ತಿದೆ.ಸ್ಥೂಲಕಾಯತೆಯು ವ್ಯಕ್ತಿಯ ಮುಕ್ತ ಮತ್ತು ಸಂಚಾರದ ಸಾಮರ್ಥ್ಯವನ್ನು ಕಿತ್ತುಕೊಳ್ಳುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಹತ್ತಿರದ ಅಂಗಡಿಗೆ ಹೋಗುವುದಕ್ಕೆ ಅಥವಾ ಮೆಟ್ಟಿಲು ಹತ್ತಲು ಸಹ ಕಷ್ಟ ಅನುಭವಿಸಬೇಕಾಗುತ್ತದೆ. ವಿಶ್ವದಾದ್ಯಂತ ಬದಲಾಗುತ್ತಿರುವ ಸಾಮಾಜಿಕ – ಸಾಂಸ್ಕೃತಿಕ ಹಾಗೂ ಜೀವನಶೈಲಿ ವ್ಯಕ್ತಿಯು ಆರೋಗ್ಯಕರ ತೂಕವನ್ನು ನಿರ್ವಹಣೆ ಮಾಡುವಲ್ಲಿ ತೊಡಕಾಗಿ ಪರಿಣಮಿಸಿದೆ.ಇದರಿಂದಾಗಿ ಬೊಜ್ಜಿನ ಸಮಸ್ಯೆ ನಿವಾರಣೆಗೆ ವೈದ್ಯರು, ಕುಟುಂಬ,ಸಮಾಜದೊಂದಿಗೆ ಎಲ್ಲರೂ ಕೈ ಜೋಡಿಸಬೇಕಾಗಿದೆ. ವಿಶ್ವ ಬೊಜ್ಜು ದಿನದ ಅಂಗವಾಗಿ ಅತಿಯಾದ ತೊಕವನ್ನು ನಿಯಂತ್ರಿಸುವುದೇ ಹೇಗೆ ಎಂಬ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ ನೀಡಲಾಗಿದೆ.   ಕುಟುಂಬದಲ್ಲಿ ಆರೋಗ್ಯಕರ ಆಹಾರ ಸೇವನೆಗೆ ಪ್ರೋತ್ಸಾಹ:  ಮಕ್ಕಳಿಗೆ ಜಂಕ್ ಪುಡ್  ನೀಡುವುದನ್ನು ತಪ್ಪಿಸಬೇಕು.ಉಪ್ಪಿನಕಾಯಿ ಅಥವಾ ಸಕ್ಕರೆ, ಕರಿದ ಮತ್ತು ಎಣೆಯುಕ್ತ ಆಹಾರಗಳು ಸುಲಭವಾಗಿ ಸಿಗುವುದರಿಂದ ಹಸಿವಿನ ಸಂದರ್ಭಗಳಲ್ಲಿ ಅವುಗಳ ಕಡೆಗೆ ಮನಸ್ಸು ಹೋಗದಂತೆ ತಡೆಗಟ್ಟಬೇಕಾಗಿದೆ. ಮಕ್ಕಳಲ್ಲಿ ಉತ್ತಮ ಆರೋಗ್ಯ ಸೇವನೆ ಬಗ್ಗೆ ಅರಿವು ಮೂಡಿಸಬೇಕಾಗಿದೆ.   ರಕ್ತದಲ್ಲಿನ ಸಕ್ಕರೆ ಪ್ರಮಾಣ ತಪಾಸಣೆ:  ಆಗಾಗ್ಗೆ ತಪಾಸಣೆ ಮಾಡಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ದೇಹದಲ್ಲಿನ ಪೌಷ್ಠಿಕಾಂಶದ ಬಗ್ಗೆ ನಿರಂತರವಾಗಿ ತಪಾಸಣೆ ಮಾಡಿಸಬೇಕಾಗುತ್ತದೆ.   ಆಹಾರ ಡೈರಿ ನಿರ್ವಹಣೆ: ಸಮತೋಲಿನ ಆಹಾರ ಆಯ್ಕೆಗೆ ಸಂಬಂಧಿಸಿದಂತೆ ಡೈರಿಯೊಂದನ್ನು ನಿರ್ವಹಣೆ ಮಾಡುವುದು ಉತ್ತಮವಾಗಿದೆ.   ನಿಯಮಿತ ವ್ಯಾಯಾಮ: ಜುಂಬಾ, ಜಲಕ್ರೀಡೆ, ಸಾಹಸ ಕ್ರೀಡೆ, ಟ್ರೆಕ್ಕಿಂಗ್ ನಿಂದ ದೇಹ ಹಾಗೂ ಮನಸ್ಸು ಚಟುವಟಿಕೆಯಿಂದ ಕೂಡಿರಲು ನೆರವಾಗಲಿದೆ. ಆ ಮೇಲಿನ ಎಲ್ಲಾ ಅಂಶಗಳಿಂದ ಸಾಮಾಜಿಕ- ಮಾನಸಿಕವಾಗಿ ಆರೋಗ್ಯ ವೃದ್ಧಿಗೆ ನೆರವಾಗಲಿದೆ.   ಬೇರಿಯಾಟ್ರಿಕ್  ಸಮಾಲೋಚನೆ:  ಅನೇಕ ಪ್ರಕರಣಗಳಲ್ಲಿ  ತೂಕವನ್ನು ಕಡಿಮೆಗೊಳಿಸಲು ಬೆರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ವೈದ್ಯರು ಶಿಫಾರಸು ಮಾಡುತ್ತಾರೆ. 2ನೇ ವಿಧದ ಡಯಾಬಿಟಿಸ್ ನಿಯಂತ್ರಿಸಲು  ಬಾರಿಯಾಟ್ರಿಕ್ ವಿಧಾನವು ಸಹಾಯ ಮಾಡುತ್ತದೆ ಎಂದು ಅನೇಕ ಜನರು ನಂಬಿದ್ದಾರೆ.  ನಗರ ಜೀವನ ಶೈಲಿಯೂ ಬೊಚ್ಚಿನ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲೂ ಕಂಡುಬರುತ್ತಿದೆ. ಇದು ಹೆಚ್ಚಾಗದಂತೆ ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು, ಸರಿಯಾದ ಮಾರ್ಗದರ್ಶನ, ಸಲಹೆಗಳಿಂದ ಈ ಸಮಸ್ಯೆ ಉಲ್ಬಣಿಸದಂತೆ ನೋಡಿಕೊಳ್ಳಬಹುದು ಎಂದು ಅಸ್ಟರ್ ಸಿಎಂಐ ಆಸ್ಪತ್ರೆಯ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಹಿರಿಯ ವೈದ್ಯರು ತಿಳಿಸಿದ್ದಾರೆ. 

ಆರೋಗ್ಯ ಸಲಹೆಗಳು – ಮಕ್ಕಳಿಗೆ ಜ್ವರ ಬಂದಾಗ ಏನು ಮಾಡಬೇಕು?

ಮಕ್ಕಳಿಗೆ ಜ್ವರ ಬಂದಾಗ ಏನು ಮಾಡಬೇಕು?

ವಾತಾವರಣ ಬದಲಾದಂತೆ ಮಕ್ಕಳಿಗೆ ಜ್ವರ, ನೆಗಡಿ ಹಾಗೂ ಕೆಮ್ಮು ಬರುವುದು ಸಾಮಾನ್ಯ. ಮಕ್ಕಳಿಗೆ ಬರುವಂತಹ ಜ್ವರ ಕಾಳಜಿ ವಹಿಸದೇ ಹೋದಲ್ಲಿ ಅದು ಗಂಭೀರ ಸ್ವರೂಪವನ್ನೂ ಪಡೆದುಕೊಳ್ಳುತ್ತದೆ. ಕೆಲವು ಜ್ವರ ಸಣ್ಣ ಪ್ರಮಾಣದ ವೈರಸ್ ಗಳಿಂದ ಬರುತ್ತದೆ.  ಮಕ್ಕಳಿಗೆ ಜ್ವರ ಬಂದ ಕೂಡಲೇ ಪೋಷಕರು ಭೀತಿಗೊಳಗಾಗುವುದು ಸಾಮಾನ್ಯ. ಕೆಲವು ಜ್ವರಗಳು ಒಂದೆರಡು ದಿನಗಳಿದ್ದರೆ, ಇನ್ನೂ ಕೆಲ ಜ್ವರ ಸಾಕಷ್ಟು ದಿನಗಳ ಕಾಲ ಮಕ್ಕಳನ್ನು ಕಾಡುತ್ತದೆ.  ಮಕ್ಕಳಿಗೆ ಜ್ವರ ಬಂದಾಗ ವೈದ್ಯರ ನೆರವು ಹಾಗೂ ಸಲಹೆ ಪಡೆದುಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ. ಮಕ್ಕಳಿಗೆ ಜ್ವರ ಬಂದಾಗ ಮನೆಯಲ್ಲಿಯೇ ಮಾಡಿಕೊಳ್ಳಬೇಕಾದ ಪ್ರಥಮ ಚಿಕಿತ್ಸೆ ಹಾಗೂ ಜ್ವರವನ್ನು ಕಂಡು ಹಿಡಿಯುವುದು ಹೇಗೆ? ಜ್ವರ ಬರಲು ಕಾರಣವೇನು ಎಂಬುದರ ವಿವರ ಇಲ್ಲಿದೆ… ಜ್ವರ ಎಂದರೇನು? ಜ್ವರ ಬರಲು ಕಾರಣವೇನು? ಮನುಷ್ಯನ ದೇಹದಲ್ಲಿ ವೈರಸ್ ಅಥವಾ ಬ್ಯಾಕ್ಟಿರಿಯಾಗಳು ದಾಳಿ ನಡೆಸಿದಾಗ ನಮ್ಮ ಅದರೊಂದಿಗೆ ಹೋರಾಟ ನಡೆಸುತ್ತದೆ. ಈ ವೇಳೆ ದೇಹದ ಉಷ್ಣಾಂಶಗಳು ಹೆಚ್ಚಾಗುತ್ತದೆ. ಈ ವೇಳೆ ಉಂಟಾಗುವ ಉಷ್ಣಾಂಶವೇ ಜ್ವರವೆಂದು ಕರೆಯಲಾಗುತ್ತದೆ. ಕೆಲವರು ಜ್ವರ ಯಾಕಾದರೂ ಬರುತ್ತದೋ ಎಂದು ಬೇಸರವಾಗುವುದುಂಟು. ಒಂದು ರೀತಿಯಲ್ಲಿ ಮನುಷ್ಯನಿಗೆ ಜ್ವರ ಬರುವುದೂ ಕೂಡ ಉತ್ತಮವಾದ ಹಾಗೂ ಆರೋಗ್ಯಕರ ದೇಹದ ಲಕ್ಷಣವೂ ಹೌದು.  ನಮ್ಮ ದೇಹದಲ್ಲಿ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಇದೆ ಎಂಬುದನ್ನು ಈ ಜ್ವರ ಸೂಚಿಸುತ್ತದೆ. ಸಣ್ಣ ರೀತಿಯಲ್ಲಿ ಬರುವ ಜ್ವರಗಳಿಗೆ ಔಷಧಿಗಳನ್ನು ತೆಗೆದುಕೊಂಡು ದೇಹದಲ್ಲಿರುವ ಹೋರಾಟದ ಶಕ್ತಿಯನ್ನು ಕುಗ್ಗಿಸಬಾರದು.  ಜ್ವರವನ್ನು ಕಂಡು ಹಿಡಿಯುವುದು ಹೇಗೆ?ಸಾಮಾನ್ಯವಾಗಿ ಕೈಯಲ್ಲಿ ಮುಟ್ಟಿ ನೋಡಿ ದೇಹ ಬಿಸಿ ಇದ್ದಾಗ ಜ್ವರ ಇದೆ ಎಂದು ಹೇಳುವುದುಂಟು. ಆದರೆ, ನಿಖರವಾಗಿ ಜ್ವರ ಇದೆ ಎಂದು ಕಂಡು ಹಿಡಿಯಲು ಥರ್ಮೋಮೀಟರ್ ಬಳಸುವುದು ಉತ್ತಮ. ಮಕ್ಕಳಿರುವ ಮನೆಗಳಲ್ಲಿ ಈ ಥರ್ಮೋಮೀಟರ್ ಅತ್ಯವಶ್ಯಕವಾಗಿರುತ್ತದೆ. ಪ್ರತೀಬಾರಿ ಇದನ್ನು ಬಳಸುವ ಮುನ್ನ ಹಾಗೂ ಬಳಸಿದ ಬಳಿಕ ಸ್ವಚ್ಛ ಮಾಡಿ ತೆಗೆದು ಇಡಬೇಕು.  ಥರ್ಮೋಮೀಟರ್ ಬಳಕೆ ಹೇಗೆ…?ಥರ್ಮೋಮೀಟರ್ ಅನ್ನು ಮೂರು ರೀತಿಯ ವಿಧಾನಗಳಲ್ಲಿ ಬಳಕೆ ಮಾಡಲಾಗುತ್ತದೆ. ರೆಕ್ಟಲ್, ಓರಲ್ ಹಾಗೂ ಆರ್ಮ್’ಪಿಟ್ ಟೆಂಪರೇಚರ್ ಎಂದು ಬಳಕೆ ಮಾಡಲಾಗುತ್ತದೆ. ರೆಕ್ಟಲ್ ಎಂದರೆ, ಮಗುವಿನ ಕಾಲಿನ ಸಂದಿ ಮೂತ್ರ ವಿಸರ್ಜನೆ ಮಾಡುವ ಜಾಗದಲ್ಲಿ ಇಟ್ಟು ಪರೀಕ್ಷೆ ಮಾಡಲಾಗುತ್ತದೆ. ಭಾರತದಲ್ಲಿ ಇದನ್ನು ಮುಜುಗರ ಎಂದು ತಿಳಿಯುವುದರಿಂದ ಮನೆಯಲ್ಲಿ ಇದನ್ನು ಮಾಡುವುದಿಲ್ಲ. ಆದರೆ, ವೈದ್ಯರು ಜ್ವರದ ನಿಖರತೆ ತಿಳಿಯಲು ಆಸ್ಪತ್ರೆಗಳನ್ನು ಈ ವಿಧಾನವನ್ನು ಅನುಸರಿಸುತ್ತಾರೆ. ಈ ವಿಧಾನ ದೇಹದ ಉಷ್ಣಾಂಶತೆಯನ್ನು ನಿಖರವಾಗಿ ತೋರಿಸುತ್ತದೆ.  ಓರಲ್ ಎಂದರೆ ಮಕ್ಕಳ ಬಾಯಲ್ಲಿಟ್ಟು ಪರೀಕ್ಷೆ ಮಾಡಲಾಗುತ್ತದೆ. ನಾಲಿಗೆಯ ಕೆಳಗೆ ಇಟ್ಟು ಉಷ್ಣಾಂಶತೆಯನ್ನು ಪರೀಕ್ಷೆ ಮಾಡಲಾಗುತ್ತದೆ. ಸಾಮಾನ್ಯ ಈ ರೀತಿಯ ವಿಧಾನವನ್ನು 4 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಮಾಡಲಾಗುತ್ತದೆ.  ಆರ್ಮ್’ಪಿಟ್ ಎಂದರೆ ಕಂಕುಳ ಸಂದಿಯಲ್ಲಿ ಇಟ್ಟು ಥರ್ಮೋಮೀಟರ್ ಇಟ್ಟು ಉಷ್ಣಾಂಶತೆಯನ್ನು ಪರೀಕ್ಷೆ ಮಾಡಲಾಗುತ್ತದೆ.  ಜ್ವರದ ನಿಖರತೆ ತಿಳಿಯುವುದು ಹೇಗೆ?ಮಕ್ಕಳನ್ನು ಸಾಮಾನ್ಯವಾಗಿ ಬಟ್ಟೆಯಲ್ಲಿ ಸುತ್ತಿ ಬೆಚ್ಚಗಿಡಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕೂಡಲೇ ಜ್ವರ ಪರೀಕ್ಷೆ ಮಾಡಿದಾಗ ಸಾಮಾನ್ಯವಾಗಿಯೇ ಉಷ್ಣಾಂಶ ಹೆಚ್ಚಾಗಿ ತೋರಿಸುತ್ತದೆ. ಬಿಸಿ ಪದಾರ್ಥಗಳನ್ನು ತಿಂದಾಗ ಅಥವಾ ತಣ್ಣಗಿನ ಪದಾರ್ಥಗಳನ್ನು ಸೇವಿಸದಾಗಲೂ ಉಷ್ಣಾಂಶವನ್ನು ನಿಖರವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ 30 ನಿಮಿಷಗಳ ಬಳಿಕ ಹಾಗೂ ಸ್ನಾನ ಮಾಡಿದ 15 ನಿಮಿಷಗಳ ಬಳಿಕ ಜ್ವರವನ್ನು ಪರಿಶೀಲಿಸಬೇಕು.  ಆರ್ಮ್’ಪಿಟ್ ಎಂದರೆ ಕಂಕುಳ ಸಂದಿಯಲ್ಲಿ ಥರ್ಮೋಮೀಟರ್ ಇಟ್ಟು ಪರಿಶೀಲನೆ ಮಾಡುವಾಗ 1 ಡಿಗ್ರಿ ಸೇರಿಸಿಕೊಂಡು ಜ್ವರವನ್ನು ಪರಿಶೀಲಿಸಬೇಕು. ರೆಕ್ಟಲ್ ಹಾಗೂ ಓರಲ್ ನಲ್ಲಿ ದೇಹದ ಉಷ್ಣಾಂಶತೆ ನಿಖರವಾಗಿ ತಿಳಿಯುತ್ತದೆ.  ವೈದ್ಯರ ಬಳಿ ಯಾವಾಗ ಹೋಗಬೇಕು…? ಪದೇ ಪದೇ ಔಷಧಿಗಳನ್ನು ನೀಡುವುದರಿಂದ ಮಗುವಿನ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಬಾರದು. ಜ್ವರ ನಿಖರತೆಯನ್ನು ತಿಳಿದು ವೈದ್ಯರ ಬಳಿ ಹೋಗಿ ಔಷಧಿಯನ್ನು ಪಡೆಯಬೇಕುತ್ತದೆ. 3 ತಿಂಗಳಿನ ಒಳಗಿನ ಮಕ್ಕಳು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಇಂತಹ ಮಕ್ಕಳ ದೇಹದ ಉಷ್ಣಾಂಶತೆ 98,99 ಇದ್ದರೆ ಅದು ಸಾಮಾನ್ಯ ಎಂದು ತಿಳಿಯಬೇಕು. 100.2ಗಿಂತಲೂ ಹೆಚ್ಚು ಉಷ್ಣಾಂಶತೆ ಇದ್ದರೆ ವೈದ್ಯರ ಬಳಿ ಹೋಗಬೇಕು. 3 ತಿಂಗಳಿಗಿಂತಲೂ ಮೇಲ್ಪಟ್ಟ ಮಕ್ಕಳಿಗೆ 101ಗಿಂತಲೂ ಹೆಚ್ಚಾಗಿದ್ದರೆ ಹೋಗಬೇಕು. 1 … Read more

ಗರ್ಭಿಣಿಯರು ಏನನ್ನು ತಿನ್ನಬಾರದು; ಕೆಲವು ಆಹಾರ ಮಾರ್ಗಸೂಚಿಗಳು.

ಗರ್ಭಿಣಿಯರು ಏನನ್ನು ತಿನ್ನಬಾರದು; ಕೆಲವು ಆಹಾರ ಮಾರ್ಗಸೂಚಿಗಳು.

ತಾಯ್ತನ ಹೆಣ್ಣಿನ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟ. ತಾಯ್ತನಕ್ಕೆ ಅಣಿಯಾಗುತ್ತಿರುವ ಮಹಿಳೆ ಏನು ತಿನ್ನಬಹುದು, ಏನು ತಿನ್ನಬಾರದು ಎಂಬುದು ಮುಖ್ಯವಾಗುತ್ತದೆ. ಗರ್ಭಾವಸ್ಥೆಯ ಹಂತದಲ್ಲಿ ಪೋಷಕಾಂಶಗಳು, ಸಮತೋಲಿತ ಆಹಾರಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಇದರಿಂದ ತಾಯಿ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭವತಿಯಾಗಿರುವಾಗ ಏನು ಸೇವಿಸಬಹುದು, ಏನು ಸೇವಿಸಬಾರದು ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಆಲ್ಕೋಹಾಲ್: ಗರ್ಭಿಣಿಯರು ಆಲ್ಕೋಹಾಲ್ ಸೇವಿಸಿದರೆ ಅದರಲ್ಲಿರುವ ನಂಜು ಅಥವಾ ವಿಷಕಾರಿ ಅಂಶ ಭ್ರೂಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗರ್ಭವತಿ ತಾಯಿಯ ಮೇಲೆ ಆಲ್ಕೋಹಾಲ್ ಸೇವನೆ ಹಸಿವು ಕಡಿಮೆ ಮಾಡಿ ಅಪೌಷ್ಟಿಕತೆ ಹೆಚ್ಚಿಸುತ್ತದೆ. ಕಾಕ್ಟೈಲ್ ಗಳಲ್ಲಿ ಅಥವಾ ಇತರ ಆಹಾರ ಪದಾರ್ಥಗಳಲ್ಲಿ ಸಣ್ಣ ಪ್ರಮಾಣದಲ್ಲಿ ಕೂಡ ಆಲ್ಕೋಹಾಲ್ ಸೇವಿಸಬಾರದು.  ತೊಳೆಯದೆ ಬಳಸುವ ಹಣ್ಣು-ತರಕಾರಿಗಳು: ಆರೋಗ್ಯಕರ ಪಥ್ಯ ಅಥವಾ ಡಯಟ್ ನಲ್ಲಿ ಹಣ್ಣು ಮತ್ತು ತರಕಾರಿ ಪ್ರಮುಖ ಭಾಗವಾದರೂ ಅವುಗಳನ್ನು ಸರಿಯಾಗಿ ತೊಳೆಯದೆ, ಸ್ವಚ್ಛ ಮಾಡದೆ ಬಳಸಿದರೆ ತಾಯಿ ಮತ್ತು ಭ್ರೂಣದಲ್ಲಿರುವ ಶಿಶುವಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ.ಸೋಂಕುಗಳು ಕೂಡ ತಗಲುವ ಸಾಧ್ಯತೆಯಿದೆ. ಗರ್ಭವತಿಯರು ಹಸಿ ತರಕಾರಿಗಳನ್ನು ಸೇವಿಸುವುದಕ್ಕಿಂತ ಹೆಚ್ಚಾಗಿ ಶುಚಿಯಾದ ಬೇಯಿಸಿದ ತರಕಾರಿಗಳನ್ನು ಸೇವಿಸುವುದು ಒಳಿತು. ಬಾಳೆಹಣ್ಣು, ಕಿತ್ತಳೆ ಮೊದಲಾದ ಹಣ್ಣುಗಳು ಸೇವನೆಗೆ ಉತ್ತಮ. ಕೆಫೀನ್: ಅತಿಯಾಗಿ ಕೆಫೀನ್ ಸೇವಿಸುವುದರಿಂದ ಅದು ಗರ್ಭದ ಮೇಲೆ ಪರಿಣಾಮ ಬೀರಿ ಮಗುವಿನ ಆರೋಗ್ಯಕ್ಕೆ ಕುಂದುಂಟಾಗಬಹುದು. ಗರ್ಭಾವಸ್ಥೆಯಲ್ಲಿ ಮಹಿಳೆಯರು ಕಾಫಿ, ಟೀ, ಶಕ್ತಿವರ್ಧಕ ಪಾನೀಯಗಳು, ಪೆಪ್ಸಿ, ಕೋಲಾಗಳಂತವುಗಳನ್ನು ಸೇವಿಸದಿರುವುದು ಒಳಿತು. ಹಸಿ ಮೊಟ್ಟೆ: ಗರ್ಭವತಿಯರು ಹಸಿ ಮೊಟ್ಟೆ ಸೇವಿಸುವುದು ಅಪಾಯಕಾರಿ, ಏಕೆಂದರೆ ಅದರಲ್ಲಿರುವ ಬ್ಯಾಕ್ಟೀರಿಯಾದಿಂದ ತೀವ್ರ ಸೋಂಕು ತಗಲುವ ಸಾಧ್ಯತೆಯಿದೆ. ಮೊಟ್ಟೆಯೊಳಗಿರುವ ಹಳದಿ ಲೋಳೆ ಗಟ್ಟಿಯಾಗುವವರೆಗೆ ಮೊಟ್ಟೆಯನ್ನು ಬೇಯಿಸಿ ನಂತರ ಸೇವಿಸುವುದು ಉತ್ತಮ. ಹಸಿ ಹಾಲು: ಬಿಸಿ ಮಾಡದಿರುವ ಅಥವಾ ಪಾಶ್ಚರೀಕರಿಸದಿರುವ ಹಾಲು ಸೇವನೆ ಕೂಡ ಗರ್ಭಿಣಿಯರಿಗೆ ತೊಂದರೆಯುಂಟುಮಾಡುವ ಸಾಧ್ಯತೆಯಿದೆ, ಅದರಿಂದ ಭ್ರೂಣಕ್ಕೂ ಅಪಾಯವಿದೆ. ಹಸಿ ಹಾಲಿನಿಂದ ತಯಾರಿಸಿದ ಉತ್ಪನ್ನಗಳಾದ ಮೊಸರು, ಪನ್ನೀರ್ ಅಥವಾ ಚೀಸ್ ಸೇವನೆ ಕೂಡ ಒಳ್ಳೆಯದಲ್ಲ. ಬ್ಲೂ ಚೀಸ್ ನ್ನು ಕೂಡ ಗರ್ಭಿಣಿಯರು ಸೇವಿಸಬಾರದು. ಪಾಶ್ಚರೀಕರಿಸಿದ ಹಾಲು ಮತ್ತು ಅದರ ಉತ್ಪನ್ನಗಳು ಸೇವನೆಗೆ ಸುರಕ್ಷಿತವಾಗಿರುತ್ತದೆ.ಹಸಿ ಸಮುದ್ರ ಆಹಾರಗಳು ಮತ್ತು ಹಸಿ ಮೀನು: ಮೀನು ಆರೋಗ್ಯಕ್ಕೆ ಒಳ್ಳೆಯ ಆಹಾರ, ಆದರೆ ಗರ್ಭಿಣಿಯರು ಸೇವಿಸುವಾಗ ಕೆಲವು ಮುನ್ನೆಚ್ಚರಿಕೆ ವಹಿಸಬೇಕು. ಶಾರ್ಕ್, ಕತ್ತಿಮೀನು, ಮ್ಯಾಕೆರೆಲ್, ಹೆರಿಂಗ್ಸ್, ಸಾರ್ಡಿನ್ ಗಳನ್ನು ಮಿತ ಪ್ರಮಾಣದಲ್ಲಿ ವಾರಕ್ಕೆ 180ರಿಂದ 240 ಗ್ರಾಂಗಳಷ್ಟು ಮಾತ್ರ ಸೇವನೆ ಮಾಡಬಹುದು. ದೊಡ್ಡ ದೊಡ್ಡ ಮೀನುಗಳಲ್ಲಿ ಹೆಚ್ಚಿನ ಸಾಂದ್ರತೆಯ ಪಾದರಸವಿರುತ್ತದೆ, ಅದು ಮಗುವಿನ ನರ ವ್ಯವಸ್ಥೆಯ ಬೆಳವಣಿಗೆಗೆ ಹಾನಿಯನ್ನುಂಟುಮಾಡುತ್ತದೆ. ಹಸಿ ಮೀನು, ಸುಶಿಗಳನ್ನು ಸೇವಿಸದಿರುವುದು ಒಳ್ಳೆಯದು. ಬೇಯಿಸಿದ ಮೀನುಗಳನ್ನು ಮಾತ್ರ ಗರ್ಭಿಣಿಯರು ಸೇವಿಸಬೇಕು. ಸಮುದ್ರದ ಮೀನುಗಳನ್ನು ಸಹ ಚೆನ್ನಾಗಿ ಬೇಯಿಸಿ ತಿನ್ನಬೇಕು. ಹಸಿ ಮಾಂಸ, ಅರೆಬೆಂದ ಮಾಂಸಗಳು: ತಂದೂರಿ, ಕಬಾಬ್ ಮತ್ತು ಬಾರ್ಬೆಕ್ಯೂಡ್ ಮಾಂಸಗಳು ರಕ್ತದಿಂದ ಬೆರೆತಿರದಂತೆ ನೋಡಿಕೊಳ್ಳಬೇಕು. ಮಾಂಸದ ಬಣ್ಣ ಬೇಯಿಸಿದಾಗ ಗುಲಾಬಿ ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗಿರಬೇಕು. ಯಕೃತ್ತಿನಂತಹ ಮಾಂಸದ ಭಾಗಗಳು: ಯಕೃತ್ತಿನಂತಹ ಮಾಂಸಾಹಾರಿ ಭಾಗಗಳಲ್ಲಿ ವಿಟಮಿನ್ ಎ ಸೇರಿದಂತೆ ವಿಟಮಿನ್ ಸೇರ್ಪಡೆಯಾಗಿರುತ್ತದೆ. ವಿಟಮಿನ್ ಎ ಜಾಸ್ತಿ ಸೇವನೆ ಮಾಡಿದರೆ ಗರ್ಭಾವಸ್ಥೆಯಲ್ಲಿ ವಿಷವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಯಕೃತ್ತಿನಂತಹ ಭಾಗಗಳನ್ನು ಸೇವಿಸಬೇಡಿ.

ಮನೆ ಮದ್ದು : ಮಲ್ಲಿಗೆ, ಕರಿಬೇವು ಮತ್ತು ಕೊತ್ತಂಬರಿ.

ಮನೆ ಮದ್ದು : ಮಲ್ಲಿಗೆ, ಕರಿಬೇವು ಮತ್ತು ಕೊತ್ತಂಬರಿ

ಕರಿಬೇವು : ಅಡುಗೆಯಲ್ಲಿ ಒಗ್ಗರಣೆ ಕೊಡುವಾಗ ಕರಿಬೇವಿನ ಎಲೆ ಇಲ್ಲದಿದ್ದರೆ ಅದು ಅಪೂರ್ಣವೆನ್ನಿಸುವುದು. ಕರಿಬೇವಿನ ಸೊಪ್ಪು ಗಂಧ-ರುಚಿಗಾಗಿ ಅಷ್ಟೇ ಅಲ್ಲ, ಆರೋಗ್ಯಕ್ಕೂ ಹಿತಕರ. ಕರಿಬೇವಿನ ತವರು ಹಿಮಾಲಯ ಪ್ರದೇಶ. ಇದು ಎಲ್ಲೆಡೆ ಬೆಳೆಯುತ್ತದೆ. ಸಾರು, ಹುಳಿ, ಮಜ್ಜಿಗೆ, ಪಲ್ಯ, ಉಪಮಾ- ಇವಕ್ಕೆಲ್ಲ ಕರಿಬೇವಿನ ಕಂಪು ಬೇಕೇಬೇಕು. ಇದು ರುಚಿ-ಗಂಧ ಒದಗಿಸುವುದರ ಜೊತೆಗೆ ದೇಹದಲ್ಲಿರುವ ಸಕ್ಕರೆಯನ್ನೂ ಅಂಕೆಯಲ್ಲಿಡುತ್ತದೆ, ಅಲ್ಲದೆ ಅಜೀರ್ಣ, ಭೇದಿ, ಮಲಬದ್ಧತೆ, ಯಕೃತ್ ದೋಷಾದಿಗಳನ್ನು ಪರಿಹರಿಸಲು ವಿರಳ ಔಷಧಿಯಾಗಿದೆ. ಇದರಲ್ಲಿ ಅಸಂಖ್ಯ ರಾಸಾಯನಿಕ ದ್ರವ್ಯಗಳಿವೆ. ಕರಿಬೇವಿನ ಎಲೆಯಲ್ಲಿರುವ ತೈಲಾಂಶವನ್ನು ಬೇರ್ಪಡಿಸಿದರೆ ಅದು ದಟ್ಟ ವಾಸನೆಯ ಎಣ್ಣೆ. ಇದನ್ನು ಸಾಬೂನು ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕರಿಬೇವಿನ ಗಿಡದ ಎಲೆ, ಬೇರು, ತೊಗಟೆ, ಮತ್ತು ಹಣ್ಣುಗಳು ಕೂಡ ಉಪಯುಕ್ತವಾಗಿವೆ.  ಔಷಧೀಯ ಗುಣಗಳ ಸಂಪತ್ತೇ ಕರಿಬೇವಿನಲ್ಲಿದೆ :  ಜ್ವರದಿಂದ ಬಳಲುವಾಗ ಕರಿಬೇವಿನ ಕಷಾಯ ಸೇವಿಸಿದರೆ ದಾಹ, ಉಷ್ಣತೆ ಕಡಿಮೆಯಾಗುತ್ತದೆ.  ಬೊಜ್ಜು ಕರಗಿಸಬೇಕೆನ್ನುವವರಿಗೆ ಸುಲಭೋಪಾಯ- ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕರಿಬೇವಿನ ಎಲೆ(10ರಿಂದ 20) ತಿನ್ನಬೇಕು.  ಮಧುಮೇಹದಿಂದ ಬಳಲುವವರು ಪ್ರತಿದಿನ ಬೆಳಿಗ್ಗೆ 10 ಎಲೆ ತಿನ್ನಬೇಕು. ಮೂಲವ್ಯಾಧಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು ಜೇನುತುಪ್ಪದಲ್ಲಿ ಅದ್ದಿ ತಿನ್ನಬೇಕು.  ಆಮ್ಲಪಿತ್ತದಿಂದ (‘ಎಸಿಡಿಟಿ”ಯಿಂದ) ಬಳಲುವವರು ಕರಿಬೇವಿನ ಮರದ ತೊಗಟೆಯ ಒಂದು ಚಮಚೆ ಪುಡಿಯನ್ನು ನೀರಲ್ಲಿ ಬೆರೆಸಿ ಸೇವಿಸಬೇಕು. ಕರಿಬೇವಿನ ತಾಜಾ ಎಲೆಗಳಿಂದ ತೆಗೆದ ಶುದ್ಧ ರಸವನ್ನು ಕಣ್ಣಲ್ಲಿ ಹಾಕಿದರೆ ಕಣ್ಣಿನ ಪೊರೆಬರುವುದನ್ನು ತಡೆಯಬಹುದು.(ರಸ ತಯಾರಿಸುವಾಗ ಎಚ್ಚರ ಅವಶ್ಯ, ಸ್ವಚ್ಛತೆ ಬಹುಮುಖ್ಯ.)  ಆಮಶಂಕೆ ಭೇದಿಯಾಗುತ್ತಿದ್ದರೆ ಕರಿಬೇವಿನ ಕಷಾಯ ಉತ್ತಮ.  ರಕ್ತಭೇದಿಯ ಬಾಧೆ ಇದ್ದವರು ಕರಿಬೇವಿನ ಚಟ್ನಿ ತಿನ್ನಬೇಕು.  ಕರಿಬೇವಿನ ಎಣ್ಣೆ ಬಳಸಿದರೆ ತಲೆಗೂದಲು ಉದುರುವಿಕೆ ನಿಲ್ಲುತ್ತದೆ, ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತವೆ. ಕರಿಬೇವಿನ ತೈಲ ತಯಾರಿಸುವ ವಿಧಾನ : ಒಂದು ಭಾಗ ಕೊಬ್ಬರಿ ಎಣ್ಣೆ ಇಲ್ಲವೆ ಎಳ್ಳೆಣ್ಣೆಗೆ ಕಾಲು ಭಾಗ ಕರಿಬೇವಿನ ರಸ ಬೆರೆಸಿ, ಒಲೆಯ ಮೇಲಿಟ್ಟು ಕಾಯಿಸಬೇಕು. ಸಣ್ಣಗಿನ ಉರಿಯ ಮೇಲೆ ನೀರಿನಂಶ ಹೋಗುವ ವರೆಗೆ ಕಾಯಿಸಬೇಕು. (ಒಂದು ಸೌಟಿನಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಟ್ಟಾಗ ಚಟ್ ಚಟ್ ಶಬ್ದ ಬಾರದಿದ್ದರೆ ತೈಲ ತಯಾರಾಗಿದೆ ಎಂದರ್ಥ.) ನಂತರ ಇಳಿಸಿ, ಆರಿಸಿ, ಶೋಧಿಸಿ ಬಾಟಲಿಯಲ್ಲಿ ತುಂಬಿಡಬೇಕು.  ಸಂಶೋಧನೆ : ಇಲಿಗಳಮೇಲೆ ಕರಿಬೇವಿನ ಎಲೆಗಳ ಪ್ರಯೋಗ ಮಾಡಿದಾಗ ರಕ್ತದಲ್ಲಿ ಸಕ್ಕರೆಯ ಅಂಶ ಗಣನೀಯ ಪ್ರಮಾಣದಲ್ಲಿ ಇಳಿಮುಖವಾದುದು ರುಜುವಾತಾಗಿದೆ. ಅಡಿಗೆಯಲ್ಲಿ ಕರಿಬೇವಿನ ಎಲೆಗಳನ್ನು ಯಥೇಚ್ಛ ಬಳಸಿ ಚಟ್ನಿಪುಡಿ, ಪಲ್ಯ, ಒಡೆ, ಚಿತ್ರಾನ್ನ, ಸಾರು, ಗೊಜ್ಜು, … Read more

ಯೋಗದಿಂದ ಮಧುಮೇಹ ರೋಗವನ್ನು ಸೋಲಿಸೋಣ

ಯೋಗದಿಂದ ಮಧುಮೇಹ ರೋಗವನ್ನು ಸೋಲಿಸೋಣ

ಡಯಾಬಿಟಿಸ್ ಅಥವಾ ಮಧುಮೇಹ ಹೆಸರು ಕೇಳಿದ ತಕ್ಷಣವೇ ಹಲವರ ಬಾಯಿ ಕಹಿಯಾಗಲು ಆರಂಭಿಸುತ್ತದೆ. ಮಾನವ ಸಂಕುಲವನ್ನು ಅತಿಯಾಗಿ ಕಾಡುತ್ತಿರುವ ಈ ರೋಗವನ್ನು ಯೋಗದಿಂದ ಖಂಡಿತ ನಿಯಂತ್ರಣದಲ್ಲಿಡಲು ಸಾಧ್ಯ. ಮಧುಮೇಹ ಅಂಟಿಕೊಳ್ಳಲು ತಾಳಬದ್ಧವಿಲ್ಲದ ಜೀವನಶೈಲಿಯೂ ಕಾರಣ. ಆದರೆ, ಈ ರೋಗವನ್ನು ಯೋಗದಿಂದ ನಿಯಂತ್ರಣದಲ್ಲಿಡುವುದು ಹೇಗೆ, ಯಾವ್ಯಾವ ಆಸನಗಳನ್ನು ಮಾಡಬೇಕು ಎಂಬುದರ ಕುರಿತು ಇಲ್ಲಿ ಸ್ಥೂಲ ಮಾಹಿತಿ ಇದೆ. ಮಧುಮೇಹವು ಅನೇಕ ಕಾರಣಗಳಿಂದ ಬರುವಂತಹ ರೋಗ ಮತ್ತು ಸರಿಯಾದ ವ್ಯಾಯಾಮದ ಅಭಾವ, ಸರಿಯಾಗಿರದ ಆಹಾರ ಪದ್ಧತಿ, ಇತ್ಯಾದಿಯಿಂದ ಉಂಟಾಗುತ್ತದೆ. ಆಧುನಿಕ ದಿನದ ಒತ್ತಡ ಈ ಸವಾಲನ್ನು ಮತ್ತಷ್ಟು ಉಲ್ಬಣಿಸುತ್ತದೆ. ಈ ಎಲ್ಲಾ ಅಂಶಗಳೂ ಜೀವನಶೈಲಿಯತ್ತ ಸೂಚಿಸುತ್ತವೆ. ವೈದ್ಯಕೀಯವಾಗಿ ಗಮನ ನೀಡುವುದರ ಜೊತೆಗೆ ಜೀವನ ಶೈಲಿಯತ್ತ ಗಮನವಿಡುವುದು ಬಹಳ ಮುಖ್ಯ. ಪ್ರಾಣಾಯಾಮ, ಯೋಗ, ಧ್ಯಾನದ ಯೋಗಿಕ ಅಭ್ಯಾಸಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಸೂಕ್ತವಾದ ರೀತಿ. ಇದರೊಡನೆ ದಿನನಿತ್ಯ ನಡೆಯುವುದನ್ನು ಮರೆಯಬಾರದು. ನಡೆಯುವುದರೊಡನೆ ಯೋಗಿಕ ಅಭ್ಯಾಸಗಳನ್ನೂ ಸೇರಿಸಿ ಮಧುಮೇಹವನ್ನು ಸೋಲಿಸೋಣ. ಯೋಗಿಕ ಅಭ್ಯಾಸಗಳಿಂದ ಅತ್ಯುತ್ತಮವಾದ ಫಲವನ್ನು ಪಡೆಯಲು ಅದನ್ನು ಎಡೆಬಿಡದೆ ನಿರಂತರವಾಗಿ ಅಭ್ಯಾಸ ಮಾಡಬೇಕು. ಸಾಧ್ಯವಾದಷ್ಟೂ ಒಂದೇ ಸಮಯದಲ್ಲಿ ಅಭ್ಯಾಸವನ್ನು ಮಾಡಿ. ನಿಮ್ಮ ದಿನನಿತ್ಯದ ಕೆಲಸಗಳಿಗೆ ಅನುಗುಣವಾಗಿ ಬೆಳಿಗ್ಗೆ ಅಥವಾ ಸಂಜೆ ಅಭ್ಯಾಸವನ್ನು ಮಾಡಿ. ಒಂದು ನಿರ್ದಿಷ್ಟವಾದ ಸಮಯವನ್ನು ಕಾದಿರಿಸಿ ಅದನ್ನು ನಿಷ್ಠೆಯಿಂದ ಪಾಲಿಸಿ. ಆಗ ಫಲಿತಾಂಶಗಳನ್ನು ಕಂಡು ಬೆರಗಾಗುತ್ತೀರಿ. ಸುಪ್ತ ಮತ್ಸ್ಯೇಂದ್ರಿಯಾಸನ ಮಲಗಿ ದೇಹವನ್ನು ತಿರುಚಿದಾಗ ಒಳಗಿನ ಅವಯವಗಳನ್ನು ತೀಡಬಹುದು ಮತ್ತು ಜೀರ್ಣದ ಪ್ರಕ್ರಿಯೆಯೂ ಸುಧಾರಿಸುತ್ತದೆ. ಈ ಭಂಗಿಯು ಹೊಟ್ಟೆಯ ಅವಯವಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಆದ್ದರಿಂದ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಇದು ಬಲು ಉತ್ತಮ.  ಧನುರಾಸನ (ಧನುಸ್ಸಿನ ಭಂಗಿ)ಧನುರಾಸನವು ಪ್ಯಾಂಕ್ರಿಯಸ್ (ಮೇದೋಜೀರಕ) ಅನ್ನು ಬಲಿಷ್ಠವಾಗಿಸುವುದರಿಂದ ಮಧುಮೇಹದ ರೋಗಿಗಳಿಗೆ ಇದು ಒಳ್ಳೆಯದು. ಈ ಯೋಗಾಸನವು ಹೊಟ್ಟೆಯ ಸ್ನಾಯುಗಳನ್ನೂ ಬಲಿಷ್ಠವಾಗಿಸುವುದಲ್ಲದೆ, ದಣಿವನ್ನು ಮತ್ತು ಒತ್ತಡವನ್ನೂ ನಿಭಾಯಿಸುವುದರಲ್ಲಿ ಉತ್ತಮ.  ಪಶ್ಚಿಮೋತ್ತಾನಾಸನ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿದಾಗ ಹೊಟ್ಟೆಯ ಮತ್ತು ಜನನಾಂಗದ ಅವಯವಗಳನ್ನು ತೀಡಲಾಗುತ್ತದೆ. ಇದು ಮಧುಮೇಹದ ರೋಗಿಗಳಿಗೆ ಉಪಯುಕ್ತಕರ. ಈ ಯೋಗದ ಭಂಗಿಯಿಂದ ದೇಹದ ಪ್ರಾಣದಲ್ಲಿ ಸಮತೋಲನವುಂಟಾಗಿ, ಮನಸ್ಸನ್ನು ಪ್ರಶಾಂತವಾಗಿ ಇಡುತ್ತದೆ.  ಅರ್ಧ ಮತ್ಸ್ಯೇಂದ್ರಿಯಾಸನ ಕುಳಿತು ಅರ್ಧ ಬೆನ್ನನ್ನು ತಿರುಚುವುದರಿಂದ ಹೊಟ್ಟೆಯ ಅವಯವಗಳು ತೀಡಲ್ಪಡುತ್ತವೆ, ಶ್ವಾಸಕೋಶಗಳಿಗೆ ಆಮ್ಲಜನಕ ಹೆಚ್ಚುತ್ತದೆ, ಬೆನ್ನೆಲುಬು ಮೃದುವಾಗುತ್ತದೆ. ಮನಸ್ಸು ಪ್ರಶಾಂತವಾಗುತ್ತದೆ, ಬೆನ್ನೆಲುಬಿಗೆ ರಕ್ತಚಲನೆ ಹೆಚ್ಚುತ್ತದೆ.  ಶವಾಸನ ಕೊನೆಯ ವಿಶ್ರಾಂತಿಯ ಭಂಗಿಯೆಂದರೆ ಶವಾಸನ. ಕೈಕಾಲು ಚಾಚಿ ಅಂಗಾತ ಮಲಗಿದ ಭಂಗಿಯಲ್ಲಿ ಒಂದೊಂದೇ ಅವಯವಗಳನ್ನು ಗಮನದಲ್ಲಿಟ್ಟುಕೊಂಡು ನಿಧಾನವಾಗಿ ಮತ್ತು ಸುದೀರ್ಘವಾಗಿ ಉಸಿರಾಡಿಸಬೇಕು. ಇದು ದೇಹವನ್ನು ಆಳವಾದ ಧ್ಯಾನದ ಸ್ಥಿತಿಗೆ ಕರೆದೊಯ್ದು, ದೇಹವು ವಿಶ್ರಾಂತಿಸಿ ಪುನರುಜ್ಜೀವಿತವಾಗುವಂತೆ ಮಾಡುತ್ತದೆ.  ಖಾಯಿಲೆಗಳ ಪ್ರಕ್ರಿಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಫ್ರೀ ರ‍್ಯಾಡಿಕಲ್ಸ್ನ ಬಗ್ಗೆ ತಿಳಿದುಕೊಳ್ಳಬೇಕು. ಫ್ರೀ ರ‍್ಯಾಡಿಕಲ್ಸ್ ನಕಾರಾತ್ಮಕವಾದ ಚಾರ್ಜನ್ನುಳ್ಳ ಅಣುಗಳಂತಹ ಪದಾರ್ಥಗಳಾಗಿದ್ದು, ಪ್ರಕೃತಿಯಲ್ಲಿ ಸ್ವಲ್ಪ ಬಹಳ ಕೆಲವೇ ಕ್ಷಣಗಳವರೆಗೆ, ನ್ಯಾನೊ ಸೆಕೆಂಡುಗಳವರೆಗೆ ಮಾತ್ರ ಇರುತ್ತದೆ. ಉದಾಹರಣೆಗೆ, ದೇಹದ ರೋಗನಿರೋಧಕ ಶಕ್ತಿಯು ಮುಕ್ತವಾದ ರ‍್ಯಾಡಿಕಲ್‌ಗಳನ್ನು ಬಿಡುಗಡೆಗೊಳಿಸಿ, ದೇಹದ ಕ್ರಿಮಿಗಳನ್ನು ನಿಯಂತ್ರಣದಲ್ಲಿಡುತ್ತದೆ. ದೇಹವು ಮುಕ್ತವಾದ ರ‍್ಯಾಡಿಕಲ್‌ಗಳನ್ನು ಆಂಟಿ-ಆಕ್ಸಿಡೆಂಟ್‌ಗಳಿಂದ ಸರಿದೂಗಿಸುತ್ತದೆ. ದೇಹದಲ್ಲಿ ಉತ್ಪಾದನೆಯಾಗುವ ಮೂರು ಮುಖ್ಯ ಆಂಟಿ ಆಕ್ಸಿಡೆಂಟ್‌ಗಳೆಂದರೆ ಗ್ಲುಟಥಯಾನ್, ಕ್ಯಾಟಲೇಸ್, ಸೂಪರ್ ಆಕ್ಸೈಡ್ ಡಿಸ್ ಮ್ಯೂಟೇಸ್ (ಎಸ್.ಒ.ಡಿ). ಬಾಹ್ಯದ ಆಂಟಿ ಆಕ್ಸಿಡೆಂಟ್‌ಗಳ ಮೂಲವೆಂದರೆ ವಿಟಮಿನ್ ಸಿ, ವಿಟಮಿನ್ ಇ, … Read more

ಮನೆ ಮದ್ದುಗಳು – ಕರಿಬೇವಿನ ಔಷಧಿ ಗುಣಗಳು

ಮನೆ ಮದ್ದುಗಳು - ಕರಿಬೇವಿನ ಔಷಧಿ ಗುಣಗಳು

ಕರಿಬೇವಿನ ಔಷಧಿ ಗುಣಗಳು : ಕರಿಬೇವು ಎಂದಾಕ್ಷಣ ಒಗ್ಗರಣೆಯ ನೆನಪಾಗುತ್ತದೆ. ಇದನ್ನು ಒಗ್ಗರಣೆ ಸೊಪ್ಪು  ಎಂದು ಕೂಡ ಕರೆಯುತ್ತಾರೆ. ಕರಿಬೇವನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಉಪಯೋಗಿಸದಿದ್ದರೆ ರುಚಿಯೇ ಬರುವುದಿಲ್ಲ. ಇದನ್ನು ಸಾಂಬಾರಿಗೆ ಒಗ್ಗರಣೆ ಕೊಡಲು, ಬಜೆ ಮಾಡಲು, ಚಟ್ನಿ ಮಾಡಲು, ಪಲ್ಯ ಮಾಡುವಾಗ ಇದರ ಬಳಕೆ ಹೆಚ್ಚು. ಕರಿಬೇವು ಇಲ್ಲದ ಅಡುಗೆ ರುಚಿಹೀನ ಎನ್ನಬಹುದು. ಈ ಕರಿಬೇವು ಅಡುಗೆಗೆ ಮಾತ್ರ ಸೀಮಿತವಾಗಿಲ್ಲ, ಇದನ್ನು ಸೌಂಧರ್ಯ ವರ್ಧಕವಾಗಿಯೂ ಉಪಯೋಗಿಸುತ್ತಾರೆ. ಕರಿಬೇವಿನ ಎಲೆಗಳು ಕಡು ಹಸಿರು ಬಣ್ಣದಲ್ಲಿದ್ದು,ತುಂಬಾ ಸುವಾಸನೆ ಭರಿತವಾಗಿರುತ್ತವೆ. ಕರಿಬೇವು ದೊಡ್ಡ ಮರವಾಗಿ ಬೆಳೆಯುತ್ತದೆ. ಇದು ಕಾಡಿನಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಇದನ್ನು ಮನೆ ಅಂಗಳದಲ್ಲಿಯೂ ಸುಲಭವಾಗಿ ಬೆಳೆಸಬಹುದಾಗಿದೆ. ಕರಿಬೇವಿನಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಿಂ, ಕಬ್ಬಿಣ, ವಿಟಮಿನ್ ಸಿ, ,ಬಿ, ಎ ಪೋಷಕಾಂಶಗಳು ಇರುತ್ತವೆ. ಇದರ ವೈಜ್ಞಾನಿಕ ಹೆಸರು ಮರಯ ಕೊನಿಗೆ (Murraya Koenigii). ಕರಿಬೇವನ್ನು ಹೆಚ್ಚು ಹೆಚ್ಚು ಆಹಾರದಲ್ಲಿ ಬಳಸುವುದು ತುಂಬಾ ಸಹಾಯಕಾರಿಯಾಗಿದೆ. ಇದು ಹೆಚ್ಚಿನ ಔಷಧಿ ಗುಣಗಳನ್ನು ಹೊಂದಿದೆ. ಬಿಳಿ ಕೂದಲ ಸಮಸ್ಯೆಯನ್ನು ಕರಿಬೇವು ದೂರಮಾಡುತ್ತದೆದೇಹದಲ್ಲಿ ಪೋಷಕಾಂಶದ ಕೊರತೆಯಾದಾಗ ಮಕ್ಕಳಿಗೆ ಕೂದಲು ಬೇಗ ಬಿಳಿಯಾಗುತ್ತದೆ. ಇಂತಹ ಸಮಸ್ಯೆಗೆ ಕರಿಬೇವು ತುಂಬಾ ಸಹಕಾರಿಯಾಗಿದೆ. ಹಾಗು ಕೂದಲ ಬೆಳವಣಿಗೆಗೂ ಉಪಯುಕ್ತವಾಗಿದೆ . ಕರಿಬೇವಿನ ಎಲೆಗಳನ್ನು ಒಣಗಿಸಿ, ಅದನ್ನು ಕೊಬ್ಬರಿ ಎಣ್ಣೆಯಲ್ಲಿ, ಎಣ್ಣೆ ಹಸಿರು ಬಣ್ಣಕ್ಕೆ ಬರುವ ವರೆಗೂ ಕುದಿಸಬೇಕು. ನಂತರ ತಣಿಸಿ ಕೂದಲಿಗೆ ಪ್ರತಿ ವಾರಕೊಮ್ಮೆ ಹಚ್ಚುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು. ಎಸಿಡಿಟಿಯನ್ನು ಕರಿಬೇವು ಕಡಿಮೆಮಾಡುತ್ತದೆ.ಕರಿಬೇವಿನ ಮರದ ತೊಗಟೆಯನ್ನ ಒಣಗಿಸಿ, ಪುಡಿಮಾಡಿಕೊಂಡು, ಒಂದು ಚಮಚ ಆ ಪುಡಿಯನ್ನು ನೀರಲ್ಲಿ ಬೆರಸಿ ಸೇವಿಸದರೆ ಎಸಿಡಿಟಿ ಕಡಿಮೆಯಾಗುತ್ತದೆ. ಕರಿಬೇವಿನಲ್ಲಿ ವಾಯುಕಾರಕವನ್ನು ತೆಗೆದು ಹಾಕುವ ಗುಣವಿದೆ1 ರಿಂದ 2 ಚಮಚದಷ್ಟು ಕರಿಬೇವಿನ ಎಲೆಯ ರಸಕ್ಕೆ, 1 ಚಮಚ ನಿಂಬೆ ರಸ ಮತ್ತು ಸಕ್ಕರೆ ಸೇರಿಸಿ ಸೇವಿಸುವುದರಿಂದ ಅಜೀರ್ಣವನ್ನು ಹೋಗಲಾಡಿಸಬಹುದು. ಅಥವಾ ಕರಿಬೇವನ್ನು ಪ್ರತಿದಿನ ಆಹಾರದಲ್ಲೂ ಕೂಡ ಉಪಯೋಗಿಸಬಹುದು. ಬೇಧಿ, ಆಮಶಂಕೆ ನಿವಾರಣೆಗೆ ಕರಿಬೇವು ಸಹಕಾರಿಎಳೆಯದಾದ ಕರಿಬೇವಿನ ಎಲೆಯನ್ನು ಜೇನು ತುಪ್ಪದೊಂದಿಗೆ ತಿನ್ನುವುದು, ಅಥವಾ ಕರಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಸೇರಿಸಿ ಕುಡಿಯುವುದರಿಂದ ಬೇಧಿ, ಆಮಶಂಕೆಯನ್ನು ನಿವಾರಿಸಬಹುದು. ಬೊಜ್ಜು ಕರಗಿಸಲು ಕರಿಬೇವು ಸಹಕಾರಿಕೆಲವರಿಗೆ ದೇಹದ ತೂಕ  ಕಡಿಮೆ ಮಾಡುವುದು ಹೇಗೆ ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. ಕರಿಬೇವು ದೇಹದಲ್ಲಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವುದರ ಮೂಲಕ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ಪ್ರತಿದಿನ ಬೆಳಿಗ್ಗೆ  ಖಾಲಿ ಹೊಟ್ಟೆಗೆ 8 ರಿಂದ 10 ತಾಜಾ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ದೇಹದ ತೂಕ ಕಡಿಮೆ ಮಾಡಬಹುದು. ಕರಿಬೇವು ಕಾಮಾಲೆ ರೋಗವನ್ನು ಗುಣಪಡಿಸುವ ಗುಣವನ್ನು ಹೊಂದಿದೆ10 ರಿಂದ 12 ಕರಿಬೇವಿನ ಎಲೆಗಳನ್ನ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಏಕೆಂದರೆ ಎಲೆಗಳ ಮೇಲೆ ಸಣ್ಣ ಪುಟ್ಟ ಕಶ್ಮಲಗಳು ಅಥವಾ ಹುಳು ಹಪ್ಪಟೆಗಳು ಹರಿದಿರುವ ಸಾಧ್ಯತೆ ಇರುತ್ತದೆ. … Read more

ಆರೋಗ್ಯ ಸಲಹೆಗಳು – ಮೊಡವೆ ನಿವಾರಿಸಲು ಮನೆಮದ್ದುಗಳು

ಮೊಡವೆ ನಿವಾರಿಸಲು ಮನೆಮದ್ದುಗಳು

ಹಲವಾರು ಕಾರಣಗಳಿಂದ ಮೊಡವೆಗಳು ಉಂಟಾಗುತ್ತಿದೆ ಅವುಗಳಲ್ಲಿ ಮಲಬದ್ಧತೆ ,ಮೂತ್ರವಿಸರ್ಜನೆ ಸರಿಯಾಗಿ ಮಾಡದಿರುವುದು ,ಕೆಮಿಕಲ್ ಕ್ರೀಮ್ ಗಳ ಬಳಕೆ ಮುಖವನ್ನು ಆಗಾಗ ತೊಳೆಯದೆ ಇರುವುದು, ಬೇರೆ ಅವರು ಬಳಸಿದ್ದ ಬಟ್ಟೆಯಿಂದ ಬರಬಹುದು, ಹೆಚ್ಚು ಮಸಾಲೆ ಭರಿತ ಆಹಾರಗಳು ಸೇವನೆ ಮಾಡಬಾರದು ಇದು ಸಹ ಕಾರಣವಾಗಿದೆ  ಉದಾಹರಣೆಗೆ ಪಾನಿಪುರಿ ಮಸಾಲಾಪುರಿ ಗೋಬಿ ಚರ್ಮದ ಸಮಸ್ಯೆಯಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಮಾಂಸಾಹಾರ ಸೇವನೆ ಮಾಡಲೇಬಾರದು ಇದರಿಂದ ಹೆಚ್ಚಾಗುತ್ತಾ ಹೋಗುತ್ತದೆ ಎಣ್ಣೆ ಪದಾರ್ಥವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ ಮಲ ಮಲಬದ್ಧತೆ ಉಂಟುಮಾಡುವ ಸಮಸ್ಯೆಗಳಲ್ಲಿ ಇದು ಕೂಡ ಒಂದಾಗಿದ್ದು ಮಲವಿಸರ್ಜನೆಯನ್ನು ಸರಿಯಾಗಿ ಮಾಡದಿದ್ದರೆ ಈ ಸಮಸ್ಯೆ ಉಂಟಾಗುತ್ತದೆ ಮಲಬದ್ಧತೆ ಸರಿಯಾಗಿ ಎಂದರೆ ನಾವು ಎಷ್ಟು ಪ್ರಮಾಣದಲ್ಲಿ ಆಹಾರವನ್ನು ತಿನ್ನುತ್ತೇವೆ ಅಷ್ಟೇ ಪ್ರಮಾಣದಲ್ಲಿ ಅದು ಹೊರಗೆ ಹೋಗಬೇಕು ಇಲ್ಲವಾದರೆ ಮಲಬದ್ಧತೆ ಉಂಟಾಗುತ್ತದೆ ಮಲಗು ಹೊಟ್ಟೆಯಲ್ಲಿ ಇದ್ದುಬಿಟ್ಟ ಹೋದ ನಂತರ ಅದು ಹೊರಗೆ ಬರದೆ ಅಲ್ಲೇ ಉಳಿದುಕೊಳ್ಳುವುದು ಇದರಿಂದ ಬ್ಯಾಕ್ಟೀರಿಯಾಗಳು ಇರುವುದರಿಂದ ಮೊಡವೆಗಳು ಉಂಟಾಗುತ್ತದೆ ಆಹಾರವನ್ನು ಎರಡು-ಮೂರು ದಿನ ಇಟ್ಟರೆ ಅದರ ವಾಸನೆಯನ್ನು ನಾವು ಹೇಗೆ ತಡೆಯಲು ಆಗುವುದಿಲ್ಲವೋ ಅದೇ ರೀತಿ ನಮ್ಮ ಹೊಟ್ಟೆಯೊಳಗಿರುವ ಒಲವು ಇದೆ ವಾಸನೆಯನ್ನು ಬೀರುತ್ತದೆ ಇದನ್ನು ನಮ್ಮ ದೇಹ ಯಾವ ರೀತಿ ತಡೆಯಬೇಕು ಒಮ್ಮೆ ಯೋಚನೆ ಮಾಡಿ  ಮೂತ್ರ ವಿಸರ್ಜನೆ ಮೊಡವೆಗಳಿಗೆ ಇದು ನೇರ ಕಾರಣವಾಗಿದೆ  ನಾವು ಮಲ ಹಾಗೂ ಮೂತ್ರ  ವಿಸರ್ಜನೆಯನ್ನು ಯಾವುದೇ ಕಾರಣಕ್ಕೂ ತಡೆಯಲು ಹೋಗಲೇಬಾರದು ತಡೆದರೆ ಇಂತಹ ಸಮಸ್ಯೆಗಳು ಬಂದೇ ಬರುತ್ತೆ ಬರೆದುಕೊಳ್ಳುವುದು ತಡೆದರೆ ಮೊಡವೆಗಳು ಹಾಗೂ ಚರ್ಮದ ಸಮಸ್ಯೆಗಳಿಗೆ ಇದು ಮೂಲ ಆಗಿದೆ ಕಾರಣ ಹೊರಬರಲು ನಮ್ಮ ಚರ್ಮವನ್ನು  ಆಧಾರವಾಗಿರುತ್ತದೆ ಏಕೆಂದರೆ ಇದು ಬೆವರಿನ ಮೂಲಕ ಹೊರಬರುವುದು ಬೆವರು “ಮೂತ್ರವೇ “ಆಗಿದೆ ಬೆವರು ನಮ್ಮ ಮುಖದಲ್ಲಿ ಹೆಚ್ಚು ಕಾಲ ಇದ್ದರೆ ಈ ಸಮಸ್ಯೆ ಕಾಣುತ್ತದೆ ಮೊಡವೆ ನಿವಾರಿಸಲು ಮನೆಮದ್ದುಗಳು ಬಿಸಿಲಿನಿಂದ ಬಂದಾಗ ಮುಖವನ್ನು ಶುದ್ಧ ನೀರಿನಿಂದ ತೊಳೆಯುವುದು, ನಿಮ್ಮ ಸೌಂದರ್ಯಕ್ಕೆ ಬಳಸುವ ಕ್ರೀಮ್ ಗಳನ್ನು ಬಳಸದೇ ಇರುವುದು ಒಳ್ಳೆಯದು ಬೇವಿನ ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ಅರೆದು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚುವುದು ನಂತರ ಒಂದು ಗಂಟೆಯ ನಂತರ ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದು ಅಥವಾ ನೀರಿನಲ್ಲಿ ತೊಳೆಯಿರಿ ಇದರಿಂದಲೇ ಗೊತ್ತಾಗುತ್ತದೆ /ಹಾಗೂ ಇದರ ರಸ ಸೇವನೆಯು ಚರ್ಮದ ಕಾಂತಿ ಹಾಗೂ ಮೊಡವೆಗಳಿಗೆ ಉಪಯುಕ್ತ ಔಷಧಿಯಾಗಿದೆ ಪರಂಗಿ ಹಣ್ಣನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಹಾಗೂ ಕಪ್ಪು ಕಲೆಗಳಿದ್ದರೆ ಗುಣವಾಗುವುದು ಶ್ರೀಗಂಧವನ್ನು ತೇಯ್ದು ಅದರ ಪೋಸ್ಟಿಗೆ ಅರಿಶಿನ ಹಾಲಿನ ಕೆನೆಗೆ ಇವೆರಡನ್ನು ಸಮನಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚುವುದು ಹಾಗಲಕಾಯಿಯನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಆಗುವ ಮದುವೆಗಳು ಗುಣವಾಗುವುದು ಅರಿಶಿಣವನ್ನು ಮುಖಕ್ಕೆ ಹಚ್ಚುತ್ತಾ ಬಂದರೆ ಮೊಡವೆಗಳು ಗುಣವಾಗುವುದು

ಮಧುಮೇಹ ನಿಯಂತ್ರಣದಲ್ಲಿಡುವ 10 ಗಿಡಮೂಲಿಕೆಗಳು

ಮಧುಮೇಹ ನಿಯಂತ್ರಣದಲ್ಲಿಡುವ 10 ಗಿಡಮೂಲಿಕೆಗಳು

ಮಧುಮೇಹಿಗಳು ಈ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಆರೋಗ್ಯದ ಕಡೆ ಈ ಹಿಂದಿಗಿಂತಲೂ ತುಂಬಾ ಎಚ್ಚರಿಕೆವಹಿಸಬೇಕಾಗಿದೆ. ಹೊರಗಡೆ ವಾಕಿಂಗ್‌ ಹೋಗಲು ಸಾಧ್ಯವಿಲ್ಲ ಅಂತ ಸುಮ್ಮನೆ ಕೂರಬಾರದು, ಮನೆಯಲ್ಲಿ ವ್ಯಾಯಾಮವನ್ನು ಮಾಡಬೇಕು ಹಾಗೂ ತೆಗೆದುಕೊಳ್ಳುವ ಆಹಾರದಲ್ಲಿ ಕಟ್ಟುನಿಟ್ಟಿನ ಪಥ್ಯ ಮಾಡಬೇಕು. ಯಾವುದೇ ಕಾರಣಕ್ಕೂ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಲು ಬಿಡಬಾರದು. ಮಧುಮೇಹದಲ್ಲಿ ಟೈಪ್1 ಹಾಗೂ ಟೈಪ್ 2 ಮಧುಮೇಹ ಎಂಬ ಎರಡು ವಿಧದಲ್ಲಿ ಶೇ. 90ರಷ್ಟು ಜನರು ಟೈಪ್ 2 ಮಧುಮೇಹ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಟೈಪ್ 2 ಮಧುಮೇಹಿಗಳಲ್ಲಿ ದೇಹಕ್ಕೆ ಅಗ್ಯತವಿರುವ ಇನ್ಸುಲಿನ್ ಪ್ರಮಾಣ ಉತ್ಪತ್ತಿ ಮಾಡುವುದಿಲ್ಲ. ಇನ್ನು ಟೈಪ್ 1 ಮಧುಮೇಹಿಗಳಲ್ಲಿ ದೇಹವು ಇನ್ಸುಲಿನ್ ಪ್ರಮಾಣ ಉತ್ಪತ್ತಿ ಮಾಡುವುದೇ ಇಲ್ಲ. ಇಂಥವರು ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳಬೇಕಾಗುತ್ತದೆ. ಟೈಪ್ 2 ಮಧುಮೇಹಿಗಳು ಮಾತ್ರೆ ಜೊತೆಗೆ ಆಹಾರಕ್ರಮದಲ್ಲಿ ಸ್ವಲ್ಪ ಕಟ್ಟುನಿಟ್ಟಿನ ಪಥ್ಯ ಪಾಲಿಸಿದರೆ ಮಧುಮೇಹ ನಿಯಂತ್ರಣದಲ್ಲಿಡುವುದು ದೊಡ್ಡ ವಿಷಯವಲ್ಲ. ಇನ್ನು ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ತಡೆಯುವಲ್ಲಿ ಕೆಲವೊಂದು ಗಿಡಮೂಲಿಕೆಗಳು ಕೂಡ ತುಂಬಾ ಸಹಕಾರಿಯಾಗಿವೆ. ಇಲ್ಲಿ ಯಾವೆಲ್ಲಾ ಗಿಡಮೂಲಿಕೆಗಳು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ ಎಂದು ನೋಡಿ: ಮೆಂತೆ:-  ಮೆಂತೆ ದೇಹದಲ್ಲಿ ಸಕ್ಕರೆಯಂಶ ಕಡಿಮೆ ಮಾಡಿ ಇನ್ಸುಲಿನ್ ಉತ್ಪತ್ತಿ ಹೆಚ್ಚುವಂತೆ ಮಾಡುತ್ತದೆ. ಇದರಲ್ಲಿ ಅಮೈನೋ ಆಮ್ಲ ಇರುವುದರಿಂದ ಮೆಂತೆಕಾಳು ಇನ್ಸುಲಿನ್ ಸೆನ್ಸಿಟಿವ್ ಹೆಚ್ಚು ಮಾಡುತ್ತದೆ. ಯಾರು 25ಗ್ರಾಂ ಮಂತೆಕಾಳು ಪ್ರತಿದಿನ ತಿನ್ನುತ್ತಾರೋ ಅವರ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ, ಊಟದ ಬಳಿಕ ಕೂಡ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ ಎಂದು ಅಧ್ಯಯನ ಹೇಳಿದೆ. ಸೂಚನೆ: ಹಾಗಂತ ಮೆಂತೆಯನ್ನು ತುಂಬಾ ಪ್ರಮಾಣದಲ್ಲಿ ತಿನ್ನುವುದು ಮಾಡಬೇಡಿ. ಇದರಿಂದ ಹೊಟ್ಟೆ ಹಾಳಾಗುವುದು, ತಲೆಸುತ್ತು, ಹೊಟ್ಟೆ ಉಬ್ಬುವುದು ಮತ್ತು ತಲೆನೋವು ಮುಂತಾದ ಅಡ್ಡ ಪರಿಣಾಮ ಉಂಟಾಗುವುದು. ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ದಿನದಲ್ಲಿ 10ಗ್ರಾಂ ಮೆಂತೆಕಾಳು ರಾತ್ರಿ ನೀರಿನಲ್ಲಿನೆನೆಹಾಕಿ, ಬೆಳಗ್ಗೆ ಎದ್ದ ಬಳಿಕ ಉಪಾಹಾರದ ಮುನ್ನ ತಿನ್ನಿ. ಅರಿಶಿಣ:– ಅರಿಶಿಣ ಕೊಂಬು ಇದ್ದರೆ ಅದನ್ನು ಸ್ವಲ್ಪ ತಿನ್ನುವುದರಿಂದ ಕೂಡ ದೇಹದಲ್ಲಿ ಇನ್ಸುಲಿನ್ ಪ್ರಮಾಣ ನಿಯಂತ್ರಣದಲ್ಲಿಡಬಹುದು. ಅರಿಶಿಣ ಪುಡಿ ಆದರೆ ಅರ್ಧ ಚಮಚ ಪುಡಿಯನ್ನು ದಿನದಲ್ಲಿ ಎರಡು ಬಾರಿ ನೀರಿನಲ್ಲಿ ಅಥವಾ ಹಾಲಿನಲ್ಲಿ ಕಲಿಸಿ ಕುಡಿಯಿರಿ. ಹಾಗಾಲಕಾಯಿ:–  ಇನ್ನು ಹಾಗಾಲಕಾಯಿ ಜ್ಯೂಸ್ ಕುಡಿಯುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇದು ದೇಹದಲ್ಲಿ ಸಕ್ಕರೆಯಂಶವನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ. ನೆನಪಿಡಿ ಹಾಗಂತ ತುಂಬಾ ಕುಡಿಯುವುದು ಕೂಡ ಒಳ್ಳೆಯದಲ್ಲ, ಜಠರಗರುಳಿನ ತೊಂದರೆ ಉಂಟಾಗುವುದು. ದಿನದಲ್ಲಿ 50ರಿಂದ 100ml ಅಂದರೆ 5-6 ಚಮಚವಷ್ಟೇ ಇದರ ಜ್ಯೂಸ್ ತೆಗೆದುಕೊಳ್ಳಿ. ಮಧುನಾಶಿನಿ ಇದು ಕುರುಚಲು ಕಾಡಿನಲ್ಲಿ ಕಂಡು ಬರುತ್ತದೆ. ಕಾಲು ಚಮಚ ಮಧುನಾಶಿನಿ , ಕಾಲು ಚಮಚ ಅಶ್ವಗಂಧ , ಸ್ವಲ್ಪ ಶತಾವರಿ ರಸ ಮತ್ತು ಮಂಜಿಷ್ಟ ರಸ ಹಾಕಿ ಮಿಶ್ರಣ ಮಾಡಿಕೊಳ್ಳಿ , ನಂತರ ಸೇವಿಸಿ . ವಾರಕ್ಕೆ ಎರಡು ಬಾರಿ ಪುನಾರಾವರ್ತಿಸಿ ಹೀಗೆ ಮಾಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಜಿನ್ಸೆಂಗ್:-  ಇದು ಚೈನೀಸ್ ಗಿಡಮೂಲಿಕೆಯಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಮಧುಮೇಹವನ್ನು ಶೇ. 15-20ರಷ್ಟು ನಿಯಂತ್ರಣದಲ್ಲಿಡುತ್ತದೆ. 3ಗ್ರಾಂ ಜಿನ್ಸೆಂಗ್ ಒಣಗಿಸಿ, ಪುಡಿ ಮಾಡಿ ಅದನ್ನು ಊಟಕ್ಕೆ ಎರಡು ಗಂಟೆ ಮುಂಚೆ ಕುಡಿಯಬೇಕು. ಹೀಗೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಹೊನ್ನೆ ಮರ:–  ಮಧುಮೇಹಿಗಳು ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದನ್ನು ತಡೆಗಟ್ಟಲು ಹಾಗೂ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಇದು ಸಹಕಾರಿಯಾಗಿದೆ. … Read more

error: Content is protected !!