ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ಮನೆ ಮದ್ದುಗಳು – ತ್ರಿಫಲ ಚೂರ್ಣ, ಇದು ಆಯುರ್ವೇದದ ಶಕ್ತಿ

ಸುಮಾರು 50 ಕ್ಕೂ ಹೆಚ್ಚು ದೇಹ ಸಮಸ್ಯೆಗಳಿಗೆ ಒಂದು ತ್ರಿಫಲ ಚೂರ್ಣದಲ್ಲಿದೆ ಶಾಶ್ವತ ಪರಿಹಾರ.

ತ್ರಿಫಲ ಚೂರ್ಣದ ಬಗ್ಗೆ ಸಾಕಷ್ಟು ಜನ ಕೇಳಿರಬಹುದು. ಹೆಸರೇ ಹೇಳೋ ಹಾಗೆ ತ್ರಿಫಲ ಚೂರ್ಣ ಅನ್ನೋದು ಮೂರು ಮೂಲಿಕೆಗಳನ್ನು ಪುಡಿ ಮಾಡಿ ಮಿಶ್ರಗೊಳಿಸಿದಾಗ ಸಿಗುವ ಚೂರ್ಣ. ತ್ರಿಫಲ ಚೂರ್ಣವನ್ನ ತಯಾರಿಸಲು ಬಳಸಲಾಗೋ ಮೂಲಿಕೆಗಳು ನೆಲ್ಲಿಕಾಯಿ ಅಥವಾ ಆಮ್ಲ ಎಂದು ಕರೆಯಲ್ಪಡೋ ಅಮಾಕಿ, ತಾರೆಕಾಯಿ ಅಥವಾ ಬಹೇಢಾ ಎಂದು ಕರೆಯಲ್ಪಡೋ ಬಿಭಿತಕಿ, ಅಳಲೆ ಅಥವಾ ಹರದ್ ಎಂದು ಕರೆಯಲ್ಪಡೋ ಹರಿತಕಿ. ಸಾವಿರಾರು ವರ್ಷಗಳ ಹಿಂದೆ ತ್ರಿಫಲ ಚೂರ್ಣವನ್ನು ಮೊದಲ ಬಾರಿಗೆ ಭಾರತದಲ್ಲಿ ಕಂಡುಕೊಳ್ಳಲಾಯಿತು ಮತ್ತು ಬಳಸಲಾಯಿತು. ತ್ರಿಫಲ ಚೂರ್ಣವನ್ನು ಮುಖ್ಯವಾಗಿ ತ್ರಿದೋಷಗಳಾದ ವಾತ, ಪಿತ್ತ ಮತ್ತು ಕಫದ ಸಮತೋಲನಕ್ಕಾಗಿ ಬಳಸಲಾಗುತ್ತದೆ. 

ಆರೋಗ್ಯ ಸಮಸ್ಯೆ ಉಳ್ಳವರು ಒಂದೆರಡು ಚಮಚ ತ್ರಿಫಲ ಚೂರ್ಣವನ್ನು ದಿನಕ್ಕೊಂದು ಬಾರಿ  ರಾತ್ರಿಯೂಟ ಮುಗಿದ ಮೇಲೆ ಸೇವಿಸಬೇಕು. ಊಟ ಮಾಡಿ ಸುಮಾರು ಒಂದು ಗಂಟೆ ಕಳೆದ ನಂತರವೇ ತ್ರಿಫಲ ಚೂರ್ಣಚನ್ನು ಸೇವಿಸತಕ್ಕದ್ದು. ಉಗುರುಬೆಚ್ಚಗಿನ ನೀರು ಅಥವಾ ಹಾಲಿನ ಜೊತೆ ಚೂರ್ಣವನ್ನು ಸೇವಿಸಿದರೆ, ಉತ್ತಮ ಫಲಿತಾಂಶ ದೊರಕುತ್ತದೆ. ಇದನ್ನು ಜೇನಿನೊಂದಿಗೂ ಸೇವಿಸಬಹುದು. 

ಹಾಗಾದ್ರೆ, ತ್ರಿಫಲ ಚೂರ್ಣದಿಂದ ಯಾವ್ಯಾವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅನ್ನೋದನ್ನ ನೋಡೋಣ ಬನ್ನಿ.

  • ತ್ರಿಫಲ ಚೂರ್ಣದ ಸೇವನೆಯಿಂದ ಅಜೀರ್ಣ, ಮಲಬದ್ಧತೆ, ಕರುಳಿನ ವೇದನೆಯಂಥ ಸಮಸ್ಯೆಗಳಲ್ಲಿ ಸಹಾಯವಾಗುತ್ತದೆ. 
  • ತ್ರಿಫಲ ಚೂರ್ಣ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ವಿವಿಧ ಬಗೆಯ ಜ್ವರಗಳೊಡನೆ ಹೋರಾಡಲು ಸಹಾಯ ಮಾಡುತ್ತದೆ. 
  • ತ್ರಿಫಲ ಚೂರ್ಣವು ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವ ಮೂಲಕ ಆಹಾರ ಉತ್ತಮವಾಗಿ ಜೀರ್ಣವಾಗುವಂತೆ ಮಾಡುತ್ತದೆ ಮತ್ತು ಕೊಬ್ಬಿನ ಅನಾವಶ್ಯಕ ಸಂಗ್ರಹವನ್ನು ತಡೆಯುತ್ತದೆ. ಹೀಗೆ ತೂಕ ಇಳಿಕೆಗೆ ಸಹಾಯವಾಗುತ್ತದೆ. 
  • ಇದು ರಕ್ತವನ್ನು ಶುದ್ಧೀಕರಿಸಿ, ರಕ್ತ ಸಂಚಲನವನ್ನು ಉತ್ತಮಗೊಳಿಸುತ್ತದೆ. ಹೀಗೆ ಶ್ವಾಸಕೋಶ ಮತ್ತು ಲಿವರ್ ನ (ಯಕೃತ್ತ) ಶುಧ್ಧೀಕರಣಕ್ಕೆ ಸಹಾಯ ಮಾಡುವ ಮೂಲಕ, ಶ್ವಾಸಕೋಶ ಮತ್ತು ಲಿವರ್ ಸಂಬಂಧಿ ಹಲವು ಕಾಯಿಲೆಗಳನ್ನು ದೂರವಿಡುತ್ತದೆ. 
  • ಸಂಶೋಧಕರ ಪ್ರಕಾರ ಈ ಚೂರ್ಣ ಕ್ಯಾನ್ಸರ್ ನೊಂದಿಗೆ ಹೋರಾಡುವ ಗುಣಗಳನ್ನು ಹೊಂದಿದೆ. 
  • ಇದು ಚರ್ಮದ ಡೆಡ್ ಸೆಲ್ಸ್ ಅನ್ನು ತೆಗೆದು, ಚರ್ಮ ಕೋಶಗಳಿಗೆ ಮರುಜೀವ ನೀಡಿ ಚರ್ಮಕ್ಕೆ ಪ್ರಾಕೃತಿಕ ಹೊಳಪನ್ನು ಒದಗಿಸುತ್ತದೆ. ಜೊತೆಗೆ, ಕಲೆಗಳು, ಸನ್ ಬರ್ನ್ ಇತ್ಯಾದಿಗಳನ್ನು ಸರಿಪಡಿಸಲು ಕೂಡ ಇದು ಸಹಾಯ ಮಾಡುತ್ತದೆ. 
  • ನಿಮ್ಮ ದೇಹವನ್ನು ಪ್ರಾಕೃತಿಕವಾಗಿ ಡೀಟಾಕ್ಸಿಫೈ ಮಾಡಲು ಇದು ಸಹಾಯ ಮಾಡುತ್ತದೆ. 
  • ತ್ರಿಫಲ ಚೂರ್ಣದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಪುರುಷರು ಮತ್ತು ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. 
  • ತ್ರಿಫಲ ಚೂರ್ಣದಲ್ಲಿರೋ ಉರಿಯೂತ ನಿವಾರಕ ಗುಣಗಳು ಸಂಧಿವಾತದಂಥ ಮೂಳೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. 
  • ಕಣ್ಣಿನ ಪೊರೆ, ಕಂಜಂಕ್ಟಿವೈಟಿಸ್, ಗ್ಲೂಕೋಮಾ, ವೃದ್ಧಿಸುತ್ತಿರುವ ಸಮೀಪದೃಷ್ಟಿ ಸಮಸ್ಯೆ ಇತ್ಯಾದಿಯಾಗಿ ಕಣ್ಣಿನ ಸಮಸ್ಯೆಗಳಿಗೂ ಇದು ಒಳ್ಳೆ ಔಷಧ
  • ಈ ತ್ರಿಫಲ ಚೂರ್ಣ ಅಸ್ವಸ್ಥತೆಯಲ್ಲಿ ಸಹಾಯ ಮಾಡೋದು ಮಾತ್ರವಲ್ಲ, ಮಿದುಳನ್ನು ಚುರುಕುಗೊಳಿಸುತ್ತದೆ, ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಆತಂಕ ಮತ್ತು ಅಂಜಿಕೆಯನ್ನ ಕಡಿಮೆಗೊಳಿಸುತ್ತದೆ. 
  • ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನ ಕುಗ್ಗಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಸುತ್ತದೆ. 
  • ಇದರಲ್ಲಿರುವ ಎಂಟಿ ಎಲರ್ಜಿಕ್ ಗುಣಗಳಿಂದಾಗಿ ಇದು ಸೂಕ್ಷ್ಮ ದೇಹವುಳ್ಳ ವ್ಯಕ್ತಿಗಳಿಗೂ ಒಳ್ಳೇದು. 

ಇನ್ನು ತ್ರಿಫಲ ಚೂರ್ಣದ ಅಡ್ಡ ಪರಿಣಾಮಗಳನ್ನ ನೋಡೋದಾದ್ರೆ

  • ತ್ರಿಫಲ ಚೂರ್ಣವನ್ನು ಅತಿಯಾಗಿ ಸೇವಿಸೋದ್ರಿಂದ ಅತಿಸಾರ ಉಂಟಾಗುವ ಸಾಧ್ಯತೆ ಇರುತ್ತದೆ.  ಇದರಿಂದ ಡೀಹೈಡ್ರೇಶನ್ ಉಂಟಾಗಬಹುದು.
  • ಗರ್ಭಿಣಿ ಮಹಿಳೆಯರು ಇದನ್ನು ಸೇವಿಸಿದರೆ  ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.
  • ಮಧುಮೇಹಿಗಳು ಈ ಚೂರ್ಣವನ್ನು ಬಳಸುವ ಮುನ್ನ ವೈದ್ಯರ ಸಲಹೆ ಪಡೆಯೋದು ಅತ್ಯಗತ್ಯ.
  • ಈ ಚೂರ್ಣದ ಸೇವನೆಯಿಂದ ಕೆಲವರಲ್ಲಿ ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆ ಸಮಸ್ಯೆಗಳೂ ಕಂಡುಬಂದಿವೆಯಂತೆ. 
  • ಆದರೆ ಭಯ ಪಡಬೇಡಿ, ಹಿತಮಿತವಾಗಿ ಸೇವಿಸಿದರೆ ಎಲ್ಲವೂ ಆನಂದಮಯ…

Leave a Comment

error: Content is protected !!