ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

(Beet Root) ಬೀಟ್‌ರೂಟ್‌ನ ಶಕ್ತಿ ಬಗ್ಗೆ ನಿಮಗೆ ಗೊತ್ತೇ..?

ನಾವು ಪ್ರತಿನಿತ್ಯ ಬಳಸುವ ತರಕಾರಿಗಳಲ್ಲಿ ಬೀಟ್ ಗೆಡ್ಡೆ ಸಹ ಒಂದು. ಬೀಟ್ ರೂಟ್ ಗೆಡ್ಡೆಗೆ ಕನ್ನಡದಲ್ಲಿ ಪ್ರತ್ಯೇಕ ಹೆಸರು ಇದ್ದಂತಿಲ್ಲ.  ಇತರೆ ತರಕಾರಿಗಳಿಗೆ ಹೋಲಿಸಿದರೆ ಬೀಟ್ ನ ಬಳಕೆ ಕಡಿಮೆ ಎಂಥಲೆ ಹೇಳಬೇಕು. ಕೆಂಬಣ್ಣದಿಂದ ತುಂಬಿರುವ ತರಕಾರಿಗಳ ರಾಣಿ ಬೀಟ್ ಗೆಡ್ಡೆ ಪೋಷಕಾಂಶಗಳ ಗಣಿ.

ಆಹಾರದಲ್ಲಿ ಇರಲೇಬೇಕಾದ ಜೀವಸತ್ವಗಳು ಇದರಲ್ಲಿವೆ. ಮುಖ್ಯವಾಗಿ ವಿಟಮಿನ್9, ಮ್ಯಾಂಗನೀಸ್, ಐರನ್, ವಿಟಮಿನ್ ಸಿ, ಇನ್ನಿತರ ಖನಿಜಗಳಿಂದ ಸಮೃದ್ಧವಾಗಿದೆ. ಅತಿ ಕಡಿಮೆ ಕೆಲೊರಿಯಿಂದ ಕೂಡಿರುವ ಹಾಗೂ ನಾರುಯುಕ್ತ ತರಕಾರಿಯೂ ಹೌದು. ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಸಗಳು ದೊರೆಯಲು ಎಲ್ಲಾ ರೀತಿಯ ತರಕಾರಿಗಳನನ್ಉ ತಿನ್ನಬೇಕು.

ಏಕೆಂದರೆ ಎಲ್ಲಾ ಬಗೆಯ ಪೋಷಕಾಂಶಗಳು ಮತ್ತು ವಿಟಮಿನ್ ಗಳು ಒಂದೇ ಬಗೆಯ ಆಹಾರದಲ್ಲಿ ಇರುವುದಿಲ್ಲ. ಅದರಲ್ಲೂ ಕೆಲವು ತರಕಾರಿಗಳು ಔಷಧೀಯ ಗುಣವನ್ನು ಹೊಂದಿದೆ. ಉದಾಹರಣೆಗೆ ಬೀಟ್ ರೂಟ್. ಬೀಟ್ ರೂಟ್ ತಿಂದರೆ ಈ ಕೆಳಗಿನ ಪ್ರಮುಖ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

ಬೀಟ್ ಗೆಡ್ಡೆಯಲ್ಲಿ ಸಹಜ ಸಕ್ಕರೆ ಅಂಶ ಅಧಿಕವಾಗಿದ್ದು, ಕೊಬ್ಬಿನ ಅಂಶ ವಿರಳವಾಗಿದೆ. ಸೋಡಿಯಂ, ಪೊಟ್ಯಾಷಿಯಂ, ರಂಜಕ, ಕ್ಯಾಲ್ಷಿಯಂ, ಅಯೋಡಿನ್, ಕಬ್ಬಿಣಾಂಶಗಳ ಗಣಿ. ಬಿ1, ಬಿ2,ಬಿ5, ಬಿ6, ಸಿ ಅನ್ನಾಂಗಗಳಿಂದ ಸಮೃದ್ಧ. ಜೀರ್ಣಕ್ರಿಯೆಗೆ, ರಕ್ತದ ಶುದ್ಧಿಗೆ ಬೀಟ್ ರೂಟ್ ಸಹಕರಿಸುತ್ತದೆ.

ಇದರಲ್ಲಿನ ಯಾಂಟಿ ಆಕ್ಸಿಡೆಂಟ್ ಗಳು ಚರ್ಮ ಸಮಸ್ಯೆಗಳಿಂದ ಪಾರು ಮಾಡುತ್ತದೆ. ಖನಿಜ ಲವಣಗಳು ಹಾಗೂ ಇತರೆ ಸೂಕ್ಷ್ಮ ಪೋಷಕಾಂಶಗಳು ಬೀಟ್ ರೂಟ್ ನಲ್ಲಿ ಹೇರಳವಾಗಿವೆ. ಬೀಟ್ ರೂಟ್ ಎಲೆಗಳನ್ನು ಚೆನ್ನಾಗಿ ಕುದಿಸಿ ಅರ್ಧ ಕಪ್ಪು ನೀರು ಬಸಿದುಕೊಂಡರೆ, ಅದರಲ್ಲಿ ಶರೀರಕ್ಕೆ ಅಗತ್ಯವಾದ ಸುಮಾರು ಶೇ.92ರಷ್ಟು ‘ಎ ‘ವಿಟಮಿನ್ ಲಭಿಸುತ್ತದೆ.

ಕೆಲವು ವಿಧದ ಕ್ಯಾನ್ಸರ್ ಗಳನ್ನು ತಡೆಯುವ ಶಕ್ತಿ ಬೀಟ್ ರೂಟ್ ಗಿದೆ.  ಇದರಲ್ಲಿನ ಶಕ್ತಿಯುತವಾದ ‘ಬೀಟಾ ಸಿಯಾನೈನ್’ ಎಂಬ ಯಾಂಟಿ ಆಕ್ಸಿಡೆಂಟ್ ಬೀಟ್ ಗೆಡ್ಡೆಗೆ ಕೆಂಬಣ್ಣವನ್ನು ಪ್ರಸಾದಿಸಿದೆ.

Leave a Comment

error: Content is protected !!