ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ಬಾಳೆ ದಿಂಡನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಪ್ರಯೋಜನಗಳು

ಬಾಳೆ ದಿಂಡನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಏನೆಲ್ಲಾ ಪ್ರಯೋಜನ ಆಗುತ್ತದೆ ಗೊತ್ತೇ. ಬಾಳೆ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತು ಹಾಗೆಯೇ ಬರಿ ಬಾಳೆಹಣ್ಣು ಅಷ್ಟೆ ಅಲ್ಲ ಬಾಳೆ ಹೂ. ಬಾಳೆ ದಿಂಡು.ಬಾಳೆ ಎಲೆ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ನಮ್ಮ ನಿತ್ಯ ಆಹಾರದಲ್ಲಿ ಬಾಳೆ ದಿಂಡನ್ನು ಬಳಕೆ ಮಾಡಿದರೆ ತುಂಬಾ ಒಳ್ಳೆಯದು ಹಾಗಿದ್ದರೆ ಎನೆಲ್ಲೆ ಪ್ರಯೋಜನ ಆಗುತ್ತದೆ ನೋಡೋಣ ಬನ್ನಿ.

  • ಮೂತ್ರ ಪಿಂಡದ ಕಲ್ಲನ್ನು ಕರಗಿಸಲು ಸಹಾಯ ಮಾಡುತ್ತದೆ. ಹೆಚ್ಚು ನೀರು ಸೇವಿಸದೇ. ಪೌಷ್ಟಿಕ ಆಹಾರವನ್ನು ಸೇವಿಸದೇ ಮೂತ್ರ ಪಿಂಡದಲ್ಲಿ ಕಲ್ಲು ಸೃಷ್ಟಿ ಆಗುತ್ತದೆ ಇದರಿಂದ ಬಹಳ ನೋವು ಅನುಭವಿಸಬೇಕಾಗುತ್ತದೆ ಅರೋಗ್ಯದ ಸ್ಥಿತಿ ಗತಿಯೇ ಬದಲಾಗುತ್ತದೆ. ಅದಕ್ಕೆ ಈ ಸಮಸ್ಯೆಯಿಂದ ದೂರ ಆಗಬೇಕು ಎಂದರೆ ಬಾಳೆದಿಂಡಿನ ಬಳಕೆ ಮಾಡಬೇಕು ಇದನ್ನು ಸೇವಿಸುತ್ತಾ ಬಂದರೆ ಸಾಕು ಮೂತ್ರಪಿಂಡದ ಕಲ್ಲು ಕರಗುತ್ತದೆ. ಬಾಳೆ ದಿಂಡು ಇದರಲ್ಲಿ ಅಧಿಕವಾದ ಫೈಬರ್ ಅಂಶ ಇರುತ್ತದೆ.
  • ಬಾಳೆ ದಿಂಡಿನ ಸೇವನೆಯಿಂದ ಸೇವಿಸಿದ ಆಹಾರ ಉತ್ತಮವಾಗಿ ಜೀರ್ಣ ಆಗುತ್ತದೆ. ದೇಹದಲ್ಲಿ ಇರುವ ಅನಗತ್ಯವಾದ ಕೊಬ್ಬನ್ನು ಕರಗಿಸಲು ಬಾಳೆ ದಿಂಡಿನ ಸೇವನೆ ಸಹಾಯ ಮಾಡುತ್ತದೆ. ಹಾಗೆಯೇ ಬಾಳೆ ದಿಂಡಿನ ರಸವನ್ನು ನಿತ್ಯ ಕುಡಿಯುತ್ತಾ ಬಂದರೆ ಅಸಿಡಿಟಿ ಸಮಸ್ಯೆ ದೂರ ಆಗುತ್ತದೆ. ಹೊಟ್ಟೆಯಲ್ಲಿ ಇರುವ ಕೆಟ್ಟ ಕಲ್ಮಶಗಳನ್ನು ದೂರ ಮಾಡಲು ಬಾಳೆದಿಂಡು ಸಹಾಯ ಮಾಡುತ್ತದೆ. ಬಾಳೆ ದಿಂಡಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಯನ್ನ ಹೆಚ್ಚಿಸುತ್ತದೆ.
  • ಬಾಳೆ ದಿಂಡು ನಿತ್ಯ ಆಹಾರದಲ್ಲಿ ಸೇವಿಸುತ್ತಾ ಬಂದರೆ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟು ಸಕ್ಕರೆ ಕಾಯಿಲೆಯಾನ್ನು ದೂರ ಮಾಡುತ್ತದೆ. ಬಾಳೆದಿಂಡಿನಲ್ಲಿ ವಿಟಮಿನ್ ಬಿ6 ಹಾಗೂ ಪೊಟ್ಯಾಶಿಯಂ ಅಂಶ ಇದ್ದು ಇದು ಅತಿಯಾದ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತುಂಬಾ ಒಳ್ಳೆಯದು.
  • ಬಾಳೆ ದಿಂಡಿನ ಸೇವನೆಯಿಂದ ದೇಹದಲ್ಲಿ ರಕ್ತ ಚಲನೆ ಉತ್ತಮವಾಗುತ್ತದೆ. ಬಾಳೆದಿಂಡು ನಮ್ಮ ದೇಹದ ಚರ್ಮಕ್ಕೆ ಮತ್ತು ತಲೆಯ ಕೂದಲಿನ ಬೆಳವಣಿಗೆಗೆ ಕೂಡ ಸಹಾಯ ಆಗುತ್ತದೆ. ದೇಹದ ಬೊಜ್ಜು ಕರಗಿಸಿ ತೂಕ ಇಳಿಸಿಕೊಳ್ಳಲು ಕೂಡ ಬಾಳೆ ದಿಂಡು ಸಹಾಯ ಮಾಡುತ್ತದೆ.

ಹಾಗಾಗಿ ನಿತ್ಯ ಒಂದೇ ರೀತಿಯ ತರಕಾರಿಯನ್ನು ಸೇವಿಸುವುದರಿಂದ ಆಹಾರದಲ್ಲಿ ಬದಲಾವಣೆ ಕಾಣಬೇಕು ಜೊತೆಗೆ ರುಚಿ ಕೂಡ ಬದಲಾಗಬೇಕು ಅದಕ್ಕೆ ಇನ್ನೂ ಮುಂದೆ ನಿಮ್ಮ ನಿತ್ಯ ಆಹಾರದಲ್ಲಿ ಬಾಳೆ ದಿಂಡು ಕೂಡ ಬಳಸಿ ಇದರಲ್ಲಿ ಸಾರು. ಪಲ್ಯ. ಗೊಜ್ಜು. ಎಲ್ಲವನ್ನೂ ಕೂಡ ಮಾಡಬಹುದು ಬಾಯಿಗೆ ಹೊಸ ರುಚಿ ಸಿಗುತ್ತದೆ ಹಾಗೆಯೇ ಆರೋಗ್ಯ ಕೂಡ ಉತ್ತಮವಾಗಿ ಇರುತ್ತದೆ. ನಮ್ಮ ಆರೋಗ್ಯವನ್ನು ನಾವೇ ನೋಡಿಕೊಳ್ಳಬಹುದು ಯಾವುದೇ ಸಮಸ್ಯೆ ಬರದ ರೀತಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಒಮ್ಮೆ ಪ್ರಯತ್ನಿಸಿ ನಿತ್ಯ ಅಡುಗೆಯಲ್ಲಿ ಬಳಸಿ.

Leave a Comment

error: Content is protected !!