ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ದೊಡ್ಡಪತ್ರೆಯಲ್ಲಿರುವ ಈ ಔಷಧೀಯ ಗುಣಗಳ ಬಗ್ಗೆ ತಿಳಿದಿರಲಿ

“ದೊಡ್ಡಪತ್ರೆ” ಅಥವಾ “ಸಾಂಬ್ರಾಣಿ ಸೊಪ್ಪು” ಅಥವಾ “ಸಾಂಬಾರ್ ಬಳ್ಳಿ” ಹೀಗೆ ನಾನಾ ಹೆಸರುಗಳಿಂದ ಕರೆಯುತ್ತೇವೆ. ಬಹಳ ಔಷಧ ಗುಣವನ್ನು ಹೊಂದಿರುವ ಸಸಿಯಿದು. ಮನೆಯ ಹಿತ್ತಲಲ್ಲಿ ಸಿಗುವಂತೆ ಬೆಳೆಸಬಹುದು. ಇದರಿಂದ ತಯಾರಿಸಬಹುದಾದ ಹಲವು ರೀತಿಯ ಅಡುಗೆಯನ್ನು ಮಾಡಬಹುದು. ದೊಡ್ಡಪತ್ರೆ ಎಲೆಗಳು ಮೃದುವಾಗಿದ್ದು, ದಪ್ಪನಾಗಿದ್ದು, ಓರೆಗಾನೊ ರೀತಿಯ ಸವಾಸನೆಯನ್ನು ಹೊಂದಿದೆ. ಈ ಸಸ್ಯ ಬಹಳ ಬೇಗ ಬೆಳೆಯುತ್ತದೆ ಮತ್ತು ಇದಕ್ಕೆ ಸ್ವಲ್ಪ ನೀರು ಸಾಕಾಗುತ್ತದೆ. ಯಾವುದೇ ರೀತಿಯ ಹವಾಮಾನದಲ್ಲಿ ಸಹ ಇದು ಬೆಳೆಯಬಲ್ಲದು. ನನ್ನ ಮನೆಯ ತೋಟದಲ್ಲಿ ದೊಡ್ಡಪತ್ರೆಯ ಸಸ್ಯವಿದ್ದು, ಅದರ ಚಿತ್ರ ಮತ್ತು ಅದರ ಎಲೆಗಳನ್ನು ಉಪಯೋಗಿಸಿ ಕೊಂಡು ತಯಾರಿಸಲಾದ ಅಡುಗೆಗಳ ಚಿತ್ರವನ್ನು ಇಲ್ಲಿ ನೀವು ಕಾಣಬಹುದು

ಸಾಮಾನ್ಯವಾಗಿ ಎಲ್ಲರ ಮನೆಯ ಕುಂಡಗಳಲ್ಲಿ ಬೆಳೆಯಬಹುದಾದ ಔಷಧೀಯ ಸಸ್ಯ ದೊಡ್ಡಪತ್ರೆ. ಕೆಮ್ಮು, ನೆಗಡಿ, ಗಂಟಲ ಸಮಸ್ಯೆಗಳಿಗೆ ಈ ಗಿಡದ ಎಲೆಗಳು ತುಂಬಾ ಉಪಕಾರಿ. ಹಾಗಾಗಿ ಇದನ್ನು ಮನೆಯಲ್ಲೇ ಬೆಳೆಯಲಾಗುತ್ತದೆ. ಯಾಕೆಂದರೆ ಅನಾರೋಗ್ಯ ಸಮಸ್ಯೆಗಳು ಎದುರಾದಾಗ ಸುಲಭವಾಗಿ ಕೈಗೆಟುಕುತ್ತದೆ. ದೊಡ್ಡಪತ್ರೆಯಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ಈಗ ನೋಡೋಣ.

* ದೊಡ್ಡ ಪತ್ರೆ ಸೊಪ್ಪನ್ನು ಹುರಿದು ರಸತೆಗೆದು ಆ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು, ಗಂಟಲು ನೋವು ಕಡಿಮೆಯಾಗುತ್ತದೆ.

* ದೊಡ್ಡ ಪತ್ರೆ ಮತ್ತು ಓಂಕಾಳನ್ನು ನೀರಲ್ಲಿ ಕುದಿಸಿ ಆ ನೀರನ್ನು ಪದೇ ಪದೇ ಸೇವಿಸಿದರೆ ಅಜೀರ್ಣದಿಂದ ಕೆಮ್ಮು ಇದ್ದರೆ ಕಡಿಮೆಯಾಗುತ್ತದೆ.

* ಚರ್ಮದಲ್ಲಿ ಗಂದೆಗಳು, ತುರಿಕೆ ಇದ್ದರೆ ದೊಡ್ಡ ಪತ್ರೆ ಸೊಪ್ಪನ್ನು ಹುರಿದು ರಸ ತೆಗೆದು ಚರ್ಮಕ್ಕೆ ಲೇಪ ಮಾಡಿದರೆ ತಕ್ಷ ಣ ತುರಿಕೆ ಮತ್ತು ಗಂದೆಗಳು ನಿವಾರಣೆಯಾಗುತ್ತವೆ.

* ಕಫ ಹೆಚ್ಚಾಗಿ ತಲೆನೋವು ಇದ್ದರೆ ದೊಡ್ಡ ಪತ್ರೆ ಪೇಸ್ಟ್‌ ಮಾಡಿ ಹಣೆಗೆ ಲೇಪ ಮಾಡಿದರೆ ತಲೆನೋವು ಶಮನವಾಗುತ್ತದೆ.

* ದೊಡ್ಡ ಪತ್ರೆ ಮತ್ತು ನೀರು ಸೇರಿಸಿ ತಯಾರಿಸಿದ ಕಷಾಯವನ್ನು ಸೇವಿಸಿದರೆ ಮನಸ್ಸು ಶಾಂತವಾಗಿ ಮನಸ್ಸಿನ ಆರೋಗ್ಯ ಹೆಚ್ಚುತ್ತದೆ.

* ಸಂಧಿಗಳಲ್ಲಿ ನೋವಿದ್ದರೆ ದೊಡ್ಡ ಪತ್ರೆ ಸೊಪ್ಪನ್ನು ಪೇಸ್ಟ್‌ ಮಾಡಿ ನೋವಿದ್ದಲ್ಲಿ ಲೇಪ ಮಾಡಿದರೆ ನೋವು ಬೇಗ ನಿವಾರಣೆಯಾಗುತ್ತದೆ.

* ದೊಡ್ಡ ಪತ್ರೆ ರಸಕ್ಕೆ ಹಸಿ ಶುಂಠಿ ರಸ ಸೇರಿಸಿ ಸೇವಿಸಿದರೆ ಹಸಿವು ಹೆಚ್ಚುತ್ತದೆ ಮತ್ತು ಅಜೀರ್ಣ ನಿವಾರಣೆಯಾಗುತ್ತದೆ.

* ಕಣ್ಣು ಸುತ್ತಲೂ ಊತ ಇದ್ದರೆ ದೊಡ್ಡ ಪತ್ರೆ ರಸವನ್ನು ಕಣ್ಣು ಸುತ್ತಲೂ ಹಚ್ಚಿದರೆ ಊತ ಕಡಿಮೆಯಾಗುತ್ತದೆ.

* ಮಕ್ಕಳಲ್ಲಿ ಕಫ ಹೆಚ್ಚಾಗಿ ಆಸ್ತಮಾ ಇದ್ದರೆ ದೊಡ್ಡ ಪತ್ರೆ ರಸವನ್ನು ಎದೆ ಮೇಲೆ ಹಚ್ಚಿದರೆ ಕಫ ಕರಗಿ ಆಸ್ತಮಾ ಕಡಿಮೆಯಾಗುತ್ತದೆ.

Leave a Comment

error: Content is protected !!