ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ಥೈರಾಯಿಡ್ ಕಡಿಮೆ ಮಾಡಿಕೊಳ್ಳಲು ಮನೆಮದ್ದು..!!

ಜನರು ಯಾವಾಗ ಆಹಾರ ಪದ್ಧತಿಯ ಕ್ರಮವನ್ನು ಬದಲಾಯಿಸುತ್ತಾ ಹೋಗುತ್ತಾರೆ ಆಗ ಅವರು ನಾನಾ ತರಹದ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ ಅಂತಹ ನಾನಾ ತರಹದ ಸಮಸ್ಯೆ ಗಳಲ್ಲಿ ಥೈರಾಯ್ಡ್ ಸಮಸ್ಯೆ ಕೂಡ ಒಂದಾಗಿದೆ, ಥೈರಾಯ್ಡ್ ಸಮಸ್ಯೆ ಬಂದರೆ ಕಾಣಿಸಿಕೊಳ್ಳುವ ಲಕ್ಷಣಗಳು ಅಂದರೆ ಒಣ ಚರ್ಮ ತೂಕ ಹೆಚ್ಚಾಗುವುದು ಜ್ಞಾಪಕ ಶಕ್ತಿ ಕ್ಷೀಣಿಸುವುದು ಮತ್ತು ಗಂಟಲಿನ ಭಾಗದಲ್ಲಿ ಊದಿಕೊಳ್ಳುವುದು ಅಥವಾ ಹೆಚ್ಚು ನೋವು ಕಂಡು ಬರುವುದು. ಈ ಮೇಲೆ ತಿಳಿಸಿದಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ ಮತ್ತು ಥೈರಾಯ್ಡ್ ಸಮಸ್ಯೆ ಎಂದು ಪರೀಕ್ಷೆಯಲ್ಲಿ ಕಂಡುಬಂದಲ್ಲಿ, ಥೈರಾಯ್ಡ್ ಸಮಸ್ಯೆ ಇನ್ನು ಸ್ಟಾರ್ಟಿಂಗ್ ಸ್ಟೇಜ್ ನಲ್ಲಿಯೇ ಇದ್ದರೆ ವೈದ್ಯರ ಚಿಕಿತ್ಸೆಯ ಬದಲು ಮನೆ ಮದ್ದನ್ನು ಬಳಸಿ ಈ ಒಂದು ಥೈರಾಯ್ಡ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಹಾಗಾದರೆ ಥೈರಾಡ್ ಸಮಸ್ಯೆಗೆ ಮನೆಯಲ್ಲಿಯೇ ಮಾಡಬಹುದಾದಂತಹ ಮನೆಮದ್ದನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ.

ಕೊಬ್ಬರಿ ಎಣ್ಣೆ.

ಕೊಬ್ಬರಿ ಎಣ್ಣೆಯನ್ನು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಒಂದು ಚಮಚ ಹಾಲಿಗೆ ಬೆರಸಿ ಕುಡಿಯುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು, ಕೂದಲಿಗೆ ಹಚ್ಚುವ ಕೊಬ್ಬರಿ ಎಣ್ಣೆಯನ್ನು ಯಾವತ್ತಿಗೂ ಕೂಡ ಕುಡಿಯಲು ಬಳಸಬಾರದು ಮಾರುಕಟ್ಟೆಯಲ್ಲಿ ಪ್ಯೂರ್ ಕೊಬ್ಬರಿ ಎಣ್ಣೆ ಸಿಗುತ್ತದೆ ಅದನ್ನು ಬಳಸುವುದರಿಂದ ಉತ್ತಮ.

ಎಳ್ಳಿನ ಎಣ್ಣೆ.

ಥೈರಾಡ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಗಂಟಲಿನ ನೋವು ಹೆಚ್ಚಾಗಿರುತ್ತದೆ ಅಂತಹವರು ಎಳ್ಳಿನ ಎಣ್ಣೆಯನ್ನು ಬೆಚ್ಚಗೆ ಮಾಡಿಕೊಂಡು ಗಂಟಲಿನ ಭಾಗಕ್ಕೆ ಮಸಾಜ್ ಮಾಡಿಕೊಳ್ಳಬೇಕು ಈ ರೀತಿ ಮಾಡಿಕೊಂಡರೆ ಥೈರಾಡ್ ಸಮಸ್ಯೆ ಕೂಡ ಕಡಿಮೆಯಾಗುವುದರ ಜೊತೆಗೆ ಗಂಟಲು ನೋವು ಕೂಡ ಕಡಿಮೆಯಾಗುತ್ತದೆ.

ಧನಿಯ ಬೀಜ.

ಒಂದು ಗ್ಲಾಸ್ ನೀರನ್ನು ಚೆನ್ನಾಗಿ ಕುದಿಸಬೇಕು ನಂತರ ಅದಕ್ಕೆ ಎರಡು ಚಮಚ ದನಿಯಾ ಬೀಜವನ್ನು ಹಾಕಿ ಕುದಿಸಬೇಕು ನಂತರ ಆ ನೀರನ್ನು ನಿಯಮಿತವಾಗಿ ಸೇವಿಸುತ್ತ ಬಂದರೆ ಥೈರಾಯ್ಡ್ ಸಮಸ್ಯೆ ದೂರವಾಗುತ್ತದೆ ಮತ್ತು ಈ ಒಂದು ನೀರನ್ನು ಸೇವಿಸುವಾಗ ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕೊಂಡಲ್ಲಿ ಇನ್ನು ಉತ್ತಮ.

ಶುಂಠಿ, ಮೆಣಸು, ಪೆಪ್ಪಲಿ.

ಒಂದು ಚಮಚ ಶುಂಠಿಯ ಪುಡಿಯನ್ನು ಒಂದು ಚಮಚ ಮೆಣಸಿನ ಪುಡಿಯನ್ನು ಮತ್ತು ಒಂದು ಚಮಚ ಪೆಪ್ಪಲಿಯ ಪುಡಿ ಅಂದರೆ (ಲಾಂಗ್ ಪೆಪ್ಪರ್) ಎಂದು ಅರ್ಥ ತೆಗೆದುಕೊಳ್ಳಬೇಕು.
ಈ ಮೂರು ಪುಡಿಯನ್ನು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಶೇಖರಿಸಿ ಇಟ್ಟುಕೊಂಡು ಪ್ರತಿದಿನ ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಅರ್ಧ ಚಮಚ ಈ ಪುಡಿಯನ್ನು ಬೆರೆಸಿ ಕುಡಿಯಬೇಕು, ಈ ರೀತಿ ಮಾಡುವುದರಿಂದ ಥೈರಾಯ್ಡ್ ಸಮಸ್ಯೆ ದೂರವಾಗುತ್ತದೆ.

ಅಲೊವೆರ.

ಲೋಳೆಸರದ ರಸವನ್ನು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುವುದರಿಂದ ಎಂತಹ ರೋಗವಾಗಲಿ ಪರಿಹಾರವಾಗುತ್ತದೆ ಮತ್ತು ಥೈರಾಯ್ಡ್ ಸಮಸ್ಯೆ ಇರುವವರು ಇದನ್ನು ಸೇವನೆ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಶುಂಠಿ ಕಶಾಯ.

ಒಂದು ಗ್ಲಾಸ್ ನೀರನ್ನು ಕುದಿಸಬೇಕು ನಂತರ ಅದಕ್ಕೆ ಶುಂಠಿಯನ್ನು ಜಜ್ಜಿ ಹಾಕಬೇಕು ಇದಕ್ಕೆ ಒಂದು ಚಮಚ ಜೇನು ರಸವನ್ನು ಬೆರೆಸಿ ಕುಡಿಯುವುದರಿಂದ ಥೈರಾಯ್ಡ್ ನಂತಹ ಸಮಸ್ಯೆ ಬೇಗನೆ ದೂರವಾಗುತ್ತದೆ.

ಮೀನು.

ಥೈರಾಡ್ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರ ಪದ್ಧತಿಯಲ್ಲಿ ಮೀನನ್ನು ವಾರಕ್ಕೆ ಎರಡು ಬಾರಿ ತಿನ್ನುವುದರಿಂದ ಈ ಮೀನಿನಲ್ಲಿ ಇರುವಂತಹ ವಿಟಮಿನ್ಸ್ ಮತ್ತು ಪ್ರೊಟೀನ್ಸ್ ಗಳು ಥೈರಾಯ್ಡ್ ಸಮಸ್ಯೆಯನ್ನು ದೂರ ಮಾಡುತ್ತದೆ.

ಗೋದಿ ಗಿಡದ ಎಲೆ.

ಥೈರಾಯ್ಡ್ ನಂತಹ ಸಮಸ್ಯೆಯಿಂದ ಬಳಲುತ್ತಿರುವವರು ಗೋಧಿ ಗಿಡದ ಎಲೆಯ ಕಷಾಯವನ್ನು ಮಾಡಿಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ನಿಯಮಿತವಾಗಿ ಸೇವನೆ ಮಾಡಿದರೆ ಈ ಸಮಸ್ಯೆಯಿಂದ ಬೇಗನೆ ಶಮನ ಪಡೆಯಬಹುದು.

ಈ ರೀತಿಯಾಗಿ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು ಮನೆ ಮದ್ದನ್ನು ಪಾಲಿಸಬಹುದಾಗಿದೆ ಮತ್ತು ಇದರ ಜೊತೆಗೆ ಹಣಬೆ ಹಾಲು ಮೊಸರು ಸಿರಿ ದಾನ್ಯಗಳು ನಿಂಬೆ ಹಣ್ಣಿನ ಜ್ಯೂಸ್ ಕ್ಯಾರೊಟ್ ಬೆಟ್ಟದ ನೆಲ್ಲಿಕಾಯಿ ವಾಲ್ ನಟ್ಸ್ ಚೆನ್ನಾಗಿ ಸೇವಿಸಬೇಕು ಮತ್ತು ದಿನಕ್ಕೆ ಎಂಟು ಲೀಟರ್ ನಷ್ಟು ನೀರನ್ನು ಕುಡಿಯಲೇಬೇಕು.

Leave a Comment

error: Content is protected !!