ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ಈ ಹಣ್ಣುಗಳನ್ನು ತಿಂದರೆ ಆರೋಗ್ಯ ಭಾಗ್ಯ ಹೆಚ್ಚುತ್ತದೆ

ಆಯಾ ಸೀಸನ್ನಲ್ಲಿ ಹೆಚ್ಚು ಲಭ್ಯವಿರುವ ಹಣ್ಣುಗಳಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದು

ಸೀಸನ್‌ಗೆ ತಕ್ಕಂತೆ ಮಾರುಕಟ್ಟೆಗೆ ಆಗಮಿಸುವ ಸತ್ವಭರಿತ ರುಚಿಯಾದ ಹಣ್ಣುಗಳು ಅಪಾರವಾದ ಜೀವಸತ್ವಗಳನ್ನು, ಪ್ರೋಟೀನ್‌, ಖನಿಜಾಂಶಗಳನ್ನು ಹೊಂದಿರುತ್ತವೆ. ದೇಹದ ಪೋಷಣೆ, ಬೆಳವಣಿಗೆ, ತ್ವಚೆಯ ಆರೋಗ್ಯ, ರೋಗನಿರೋಧಕ ಶಕ್ತಿ, ವೃದ್ಧಿ ಇತ್ಯಾದಿಗಳಿಗಾಗಿ ಹಣ್ಣನ್ನು ಸೇವಿಸುವುದು ಉತ್ತಮ. ಕೆಲವು ಸೀಸನ್‌ ಹಣ್ಣುಗಳ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಕಿವಿ ಫ್ರೂಟ್

ಕಿವಿ ಹಣ್ಣಿನಲ್ಲಿ ವಿಟಮಿನ್‌ ಸಿ ಹಾಗೂ ಇ ಹೆಚ್ಚಾಗಿರುತ್ತದೆ. ಕಣ್ಣಿನ ಆರೋಗ್ಯಕ್ಕೆ ಉತ್ತಮ. ಕ್ಯಾನ್ಸರ್‌ ಸಂಬಂಧಿಧಿ ತೊಂದರೆಗಳ ನಿವಾರಕ. ಕಡಿಮೆ ಕ್ಯಾಲೋರಿ ಹೊಂದಿದ್ದು ಹೆಚ್ಚು ಫೈಬರ್‌ಯುಕ್ತವಾಗಿದೆ. ಇದು ದೇಹದ ತೂಕ ಕಡಿಮೆ ಮಾಡುವಲ್ಲಿ ಸಹಾಯಕ. ಈ ಹಣ್ಣುಗಳನ್ನು ರೆಫ್ರಿಜಿರೇಟರ್‌ನಲ್ಲಿ 4 ವಾರಗಳವರೆಗೂ ಸಂಗ್ರಹಿಸಿಡಬಹುದು.

ಎಲ್ಲರ ಪ್ರೀತಿ ಪಾತ್ರ ಸೇಬು

100 ಗ್ರಾಂ ಸೇಬಿನ ಹಣ್ಣಿನಲ್ಲಿ 13.81 ಗ್ರಾಂನಷ್ಟು ಕಾರ್ಬೊಹೈಡ್ರೇಟ್ಸ್‌ ಹಾಗೂ 10.39 ಗ್ರಾಂನಷ್ಟು ಸಕ್ಕರೆ ಅಂಶ, 3.3 ಮಿಲಿಗ್ರಾಂನಷ್ಟು ಫೊ್ಲೕರೈಡ್‌, ಹಾಗು 85 % ನೀರಿನ ಅಂಶವಿರುತ್ತದೆ. ಆರೋಗ್ಯ ಪೂರ್ಣ ದೇಹದ ಬೆಳವಣಿಗೆಗೆ ಇದು ಉತ್ತಮವಾಗಿದ್ದು, ದಿನಕ್ಕೊಂದು ಸೇಬಿನ ಸೇವನೆ ವೈದ್ಯರನ್ನು ದೂರವಿಡುತ್ತದೆ ಎಂಬ ಗಾದೆ ಮಾತಿದೆ.

ದ್ರಾಕ್ಷಿ ಹಣ್ಣು

ದ್ರಾಕ್ಷಿ ಹಣ್ಣು ಹೆಚ್ಚು ನೀರಿನಾಂಶ ಹಾಗು ಸಕ್ಕರೆ ಅಂಶವನ್ನು ಹೊಂದಿದ್ದು, ಬೆಳೆಯುವ ಮಕ್ಕಳಿಗೆ ಉತ್ತಮ. ವಿಟಮಿನ್‌ ಬಿ1, ಬಿ2 ಮತ್ತು ಕೆ ಯಥೇಚ್ಛವಾಗಿದ್ದು ಶೇಕಡಾ 2 ರಷ್ಟು ಮಾತ್ರ ಕೊಬ್ಬಿನಾಂಶವನ್ನು ಹೊಂದಿದೆ. ಇದು ದೇಹಕ್ಕೆ ಅಗತ್ಯವಾದ ಖನಿಜಾಂಶವನ್ನು ಒದಗಿಸುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ. ದೇಹದಲ್ಲಿನ ನೀರಿನಾಂಶವನ್ನು ಕಾಪಾಡಲು ಸಹಕಾರಿ.

ಪರಂಗಿ ಹಣ್ಣು

ಪರಂಗಿ ಹಣ್ಣು ಉತ್ತಮ ವಿಟಮಿನ್‌ ಸಿ, ಇ, ಮತ್ತು ಡಿ ಹೊಂದಿದ್ದು , ಕಣ್ಣು ಹಾಗು ತ್ವಚೆಯ ಆರೋಗ್ಯಕ್ಕೆ ಉತ್ತಮವಾದದ್ದು. ಕೊಲೆಸ್ಟ್ರಾಲ್‌ ಕಡಿಮೆಗೊಳಿಸುತ್ತದೆ. ದಿನ ನಿತ್ಯದ ಡಯಟ್‌ಗೆ ಈ ಹಣ್ಣಿನ ಸಲಾಡ್‌ ಉತ್ತಮವಾದದ್ದು. ಹೊಟ್ಟೆಯಲ್ಲಿನ ಜಂತುಗಳ ನಾಶಕ್ಕೆ ಉತ್ತಮ ರಾಮಬಾಣ. ಮಾರಕ ರೋಗಗಳ ನಿಯಂತ್ರಣಕ್ಕೆ ಉತ್ತಮ ಔಷಧಿಧಿ.

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಗ್ರೀನ್‌ ಟೀ ಹಾಗು ರೆಡ್‌ ವೈನ್‌ನಲ್ಲಿರುವ ರೋಗನಿರೋಧಕ ಶಕ್ತಿಗಿಂತಲೂ ಇದು ಹೆಚ್ಚಿನ ಅಂಶವನ್ನು ಹೊಂದಿದೆ. ಕಡಿಮೆ ಕ್ಯಾಲೋರಿ ಹೊಂದಿದ್ದು ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ. ಈ ಹಣ್ಣಿನ ಜ್ಯೂಸ್‌ ಸೇವನೆ ದೇಹದ ತೂಕ ಇಳಿಸಲು ಉತ್ತಮ ಮಾರ್ಗ. ಬೆಳೆಯುವ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶವನ್ನು ನೀಡುತ್ತದೆ.

ಸ್ಟಾರ್ಫ್ರೂಟ್ಸ್

ಸ್ಟಾರ್‌ ಫ್ರೂಟ್ಸ್‌ ಸ್ವಲ್ಪ ಹುಳಿ ರುಚಿ ಹೊಂದಿದ್ದರೂ ಈ ಹಣ್ಣಿನ ಜೂಸ್‌, ಶೇಕ್‌ ರುಚಿಯಾಗಿರುತ್ತದೆ. ಇದು ನಕ್ಷ ತ್ರಾಕಾರದಲ್ಲಿದ್ದು, ವಿಟಮಿನ್‌ ಎ, ಬಿ, ಸಿ, ಹೊಂದಿದೆ. ಇದರಲ್ಲಿನ ವಿಟಮಿನ್‌ ಬಿ 9ಹೃದಯ ಹಾಗೂ ನರ ಸಂಬಂಧಿಧಿ ತೊಂದರೆಗೆ ಉತ್ತಮ ಔಷಧಿಧಿ. ಜೀರ್ಣಶಕ್ತಿ ಹೆಚ್ಚಿಸುತ್ತದೆ. 9.5 ರಷ್ಟು ಕಾರ್ಬೋಹೈಡ್ರೇಟ್ಸ್‌, 2.5 ಗ್ರಾಂ ನಾರಿನಾಂಶ ಹೊಂದಿದೆ.

ಹಣ್ಣುಗಳ ಸೇವನೆ ಆರೋಗ್ಯವೃದ್ಧಿಗೆ ಕಾರಣ. ಅದರಲ್ಲೂ ಮಕ್ಕಳಿಗೆ ಮೊದಲಿನಿಂದಲೂ ಜಂಕ್ಫುಡ್ಫುಡ್ಬದಲು ಹಣ್ಣುಗಳ ಸೇವನೆಯತ್ತ ಅಭ್ಯಾಸ ಮಾಡಿಸಬೇಕು.

ಕಾವೇರಿ, ಡಯಟೀಶಿಯನ್

Leave a Comment

error: Content is protected !!